ಚಾರ್ಜ್‌ಗಿಟ್ಟು ಮಾತನಾಡುತ್ತಿದ್ದ ವೇಳೆ ಮೊಬೈಲ್ ಸ್ಪೋಟ..! ➤ ವ್ಯಕ್ತಿಯೋರ್ವ ಮೃತ್ಯು

(ನ್ಯೂಸ್ ಕಡಬ)newskadaba.com ಮಧ್ಯಪ್ರದೇಶ, ಮಾ.03. ಮೊಬೈಲ್‌ ಫೋನ್‌ನ್ನು ಚಾರ್ಜ್‌ಗೆ ಇಟ್ಟು ಮಾತನಾಡುತ್ತಿದ್ದ ವೇಳೆ ಫೋನ್ ಸ್ಪೋಟಗೊಂಡು ವ್ಯಕ್ತಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ದಯಾರಾಮ್ ಬರೋದ್ (68) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಪತ್ನಿ ಸಾವನ್ನಪ್ಪಿದ ಬಳಿಕ ಬದ್‌ನಗರ ತೆಹಸಿಲ್‌ನ ರುನಿಜಾ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಅವರು, ಮೊಬೈಲ್‌ನ್ನು ಚಾರ್ಜ್‌ಗೆ ಇರಿಸಿ ತನ್ನ ಸ್ನೇಹಿತನೊಂದಿಗೆ ಅದೇ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು.

 

Scroll to Top