ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ➤ 14 ಮಂದಿ ದುರ್ಮರಣ

(ನ್ಯೂಸ್ ಕಡಬ)newskadaba.com ಮಧ್ಯಪ್ರದೇಶ, ಫೆ.25. ಮೊಹಾನಿಯಾ ಸುರಂಗದ ಬಳಿ ಟ್ರಕ್ ವೊಂದು ನಿಂತಿದ್ದ ಬಸ್ ಗಳಿಗೆ ಢಿಕ್ಕಿ ಹೊಡೆದ ಪರಿಣಾಮ, 14 ಜನರು ಮೃತಪಟ್ಟು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.


ಗೃಹ ಸಚಿವ ಅಮಿತ್ ಶಾ ಅವರ ರ್ಯಾೊಲಿಗೆ ತೆರಳಿದ್ದ ಬಸ್ ನ್ನು ಚಾಲಕರು ಸುರಂಗ ಮಾರ್ಗದ ಬಳಿ ನಿಲ್ಲಿಸಿದ್ದಾರೆ. ಆಗ ಎದುರಗಡೆಯಿಂದ ವೇಗವಾಗಿ ಬರುತ್ತಿದ್ದ ಟ್ರಕ್ ವೊಂದು ಬಸ್ ಗಳಿಗೆ ಡಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಒಂದು ಬಸ್ ಪಲ್ಟಿಯಾಗಿದ್ದು, ಉಳಿದ ಬಸ್ಗಳು ಢಿಕ್ಕಿಯಾದ ರಭಸಕ್ಕೆ ಜಖಂಗೊಂಡಿದ್ದವು.

Scroll to Top