ನಾಳೆ ಜನಪ್ರಿಯ ಬಜೆಟ್ ಮಂಡನೆ         ➤ ಬಜೆಟ್​​ಗಾಗಿ ಸಿಎಂ ಬೊಮ್ಮಾಯಿ ತಯಾರಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.16. ಹಾಲಿ ಸರ್ಕಾರದ ಕೊನೆಯ ಬಜೆಟ್ ಅನ್ನು ಸಿಎಂ ಬಸವರಾಜ ಬೊಮ್ಮಾಯಿ‌ ನಾಳೆ (ಫೆ.17ಕ್ಕೆ) ಮಂಡಿಸಲಿದ್ದಾರೆ.

ಇದು ಬೊಮ್ಮಾಯಿ ಮಂಡಿಸುವ 2ನೇ ಬಜೆಟ್ ಆಗಿದ್ದು, ಚುನಾವಣ ವರ್ಷವಾದುದರಿಂದ ಜನಪ್ರಿಯ, ಯಾವುದೇ ತೆರಿಗೆ ಹೊರೆ ಇಲ್ಲದ , ಎಲ್ಲಾ ಸಮುದಾಯವನ್ನು ತೃಪ್ತಿ ಪಡಿಸುವಂತಹ ಬಜೆಟ್ ಮಂಡಿಸುವ ಸಾಧ್ಯತೆ ಇದೆ.

ನಾಳೆ ಬೆಳಗ್ಗೆ 10.15ಕ್ಕೆ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಈಗಾಗಲೇ ಅಧಿಕಾರಿಗಳ ಜೊತೆ ಬಜೆಟ್ ಪೂರ್ವತಯಾರಿ ಸಭೆಗಳನ್ನು ನಡೆಸಿರುವ ಸಿಎಂ, ಇದೀಗ ಅಂತಿಮ ಟಚ್ ನೀಡುತ್ತಿದ್ದಾರೆ.

 

 

Scroll to Top