ಮಂಗಳೂರು: ದುಬೈಯಿಂದ ಸಾಗಿಸುತ್ತಿದ್ದ 90 ಲಕ್ಷ ರೂ. ಮೌಲ್ಯದ ಚಿನ್ನ ವಶ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.03. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಸ್ಟಮ್ಸ್ ಅಧಿಕಾರಿಗಳು 90,34,970 ರೂ. ಮೌಲ್ಯದ 1617 ಗ್ರಾಂ ತೂಕದ ಚಿನ್ನವನ್ನು ಐವರು ಪುರುಷ ಪ್ರಯಾಣಿಕರಿಂದ ವಶಪಡಿಸಿಕೊಂಡಿದ್ದಾರೆ.


ದುಬೈಯಿಂದ ಆಗಮಿಸಿದ ಐವರು ಪುರುಷ ಪ್ರಯಾಣಿಕರಿಂದ ಈ ಚಿನ್ನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಟ್ರಾಲಿ ಬ್ಯಾಗ್‌ನ ಬೀಡಿಂಗ್‌ನಲ್ಲಿ, ಗುದನಾಳದಲ್ಲಿ ಬಚ್ಚಿಕೊಂಡು ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಅವರು ಚಿನ್ನವನ್ನು ಕಳ್ಳ ಸಾಗಾಟ ಮಾಡುತ್ತಿದ್ದರು.

Scroll to Top