ಫೇಸ್ ಬುಕ್ ನಲ್ಲಿ ಪರಿಚಯ; 8 ತಿಂಗಳಿಗೆ ಕೊಲೆಯಾದ ಯುವತಿ ➤ ಪ್ರಿಯಕರ ನಾಪತ್ತೆ !

(ನ್ಯೂಸ್ ಕಡಬ)newskadaba.com ಹಾಸನ, ಜ.28. ಫೇಸ್ ಬುಕ್ ನಲ್ಲಿ ಪರಿಚಯವಾದ ಯುವಕನೊಂದಿಗೆ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದ ಯುವತಿ 8 ತಿಂಗಳಿಗೆ ಹೆಣವಾದ ಘಟನೆ ಹಾಸನ ಹೊರವಲಯದ ಗುಡ್ಡೇನಹಳ್ಳಿಯಲ್ಲಿ ನಡೆದಿದೆ. ಬೆಂಗಳೂರಿನ ವಿಜಯನಗರ ನಿವಾಸಿ ಸಿರಿಸ್ (22) ಕೊಲೆಯಾದ ಯುವತಿ ಎಂದು ತಿಳಿದುಬಂದಿದೆ. ಫೇಸ್ ಬುಕ್ ನಲ್ಲಿ ಪರಿಚಯವಾದ ಆದರ್ಶ್ ಮತ್ತು ಸಿರಿಸ್ ಗುಡ್ಡೇನಹಳ್ಳಿಯಲ್ಲಿ ಮಾಲೀಕರಿಗೆ ಮದುವೆಯಾಗಿದೆ ಎಂದು ಹೇಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.


ಇಬ್ಬರು ಒಂದೇ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಬಾಡಿಗೆ ಮನೆಗೆ ಹೋದ ಒಂದೇ ತಿಂಗಳಲ್ಲಿ ಅದೇ ಮನೆಯಲ್ಲಿ ಸಿರಿಸ್ ಶವವಾಗಿ ಪತ್ತೆಯಾಗಿದ್ದಾಳೆ. ಸಿರಿಸ್ ಪತ್ನಿಯನ್ನು ಕೊಂದು ಮನೆಗೆ ಬೀಗ ಹಾಕಿ ಎಸ್ಕೇಪ್ ಆಗಿರುವ ಅನುಮಾನಗಳು ವ್ಯಕ್ತವಾಗಿವೆ. ಇನ್ನು ಪೆನ್‌ಷನ್‌ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

Scroll to Top