ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಆಳಕ್ಕೆ ಉರುಳಿ ಬಿದ್ದ ಕಾರು !

(ನ್ಯೂಸ್ ಕಡಬ)newskadaba.com ಸುಳ್ಯ, ಜ.24. ಇನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಆಳಕ್ಕೆ ಉರುಳಿ ಬಿದ್ದು ಅದರಲ್ಲಿದ್ದ ಓರ್ವನ ಕಾಲು ಜಖಂಗೊಂಡ ಘಟನೆ ಸುಳ್ಯದಲ್ಲಿ ವರದಿಯಾಗಿದೆ.

ಮಣಿಪಾಲ ಮೂಲದ ಸಮೃದ್ಧಿ ಸೊಸೈಟಿ ಸಂಸ್ಥೆಗೆ ಸೇರಿದ ಇನೋವಾ ಕಾರು ಮಡಿಕೇರಿಗೆ ತೆರಳಿ ಮರಳಿ ಮಣಿಪಾಲಕ್ಕೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಇನ್ನು ಕಾರು ಉರುಳಿದ ಬಳಿಕ ಅಲ್ಲೇ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಅಪಘಾತದಿಂದ ಕಾರಿನಲ್ಲಿದ್ದ ಓರ್ವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಉಳಿದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕ್ರೈನ್ ಮೂಲಕ ಕಾರನ್ನು ಮೇಲೆಕೆತ್ತಲಾಯಿತು ಎಂದು ತಿಳಿದುಬಂದಿದೆ.

 

Scroll to Top