(ನ್ಯೂಸ್ ಕಡಬ)newskadaba.com ಕೊಲ್ಕತ್ತ, ಜ.16. 72 ವರ್ಷದ ಹಿಂದಿನ ಅತ್ಯಂತ ಹಳೆಯ ಪ್ರಕರಣವೊಂದು ಇದೀಗ ಕೋಲ್ಕೊತ್ತಾ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದೆ. ವಿಶೇಷ ಎಂದರೆ, ಪ್ರಕರಣ ಇತ್ಯರ್ಥಗೊಳಿಸಿದ ಮುಖ್ಯ ನ್ಯಾಯಮೂರ್ತಿಯವರು ಜನಿಸಿದ್ದೇ ಈ ಪ್ರಕರಣ ದಾಖಲಾಗಿದ್ದ ಹತ್ತು ವರ್ಷಗಳ ಬಳಿಕ!
ಸಾಮಾನ್ಯವಾಗಿ ಯಾವುದೇ ಪ್ರಕರಣ ಕೋರ್ಟ್ ಮೆಟ್ಟಿಲೇರಿದರೆ ಅದು ಇತ್ಯರ್ಥ ಕಾಣಲು ವರ್ಷಗಟ್ಟಲೆ ಕಾಯಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಏಳು ದಶಕಕ್ಕೂ ಹೆಚ್ಚು ಕಾಲ ಕಾಯಬೇಕಾಗಿ ಬಂದಿದೆ. ದೇಶದ ಅತ್ಯಂತ ಹಳೆಯ ಹೈಕೋರ್ಟ್ ಕೋಲ್ಕೊತ್ತಾ ಹೈಕೋರ್ಟ್‌ನಲ್ಲಿ 72 ವರ್ಷಗಳ ಹಳೆಯ ಪ್ರಕರಣವೊಂದನ್ನು ಇತ್ಯರ್ಥಗೊಳಿಸಲಾಯಿತು. ಈ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ್ ಅವರು ಜನಿಸಿದ್ದು ಈ ಪ್ರಕರಣ ದಾಖಲಾಗಿ 10 ವರ್ಷಗಳ ನಂತರವೇ ಎಂಬುದು ವಿಶೇಷ.