(ನ್ಯೂಸ್ ಕಡಬ) newskadaba.com ದೆಹಲಿ, ಡಿ. 13. ನವದೆಹಲಿ ಆಸ್ತಿ ನೋಂದಣಿಯಿಂದ ಆರಂಭವಾಗಿ, ಮದುವೆ ನೋಂದಣಿಯವರೆಗೆ ದೆಹಲಿಯ ಎಲ್ಲಾ ಸಬ್-ರಿಜಿಸ್ಟಾರ್ ಹುದ್ದೆಗಳಿಗೆ ಮಹಿಳೆಯರನ್ನಷ್ಟೇ ನೇಮಕ ಮಾಡುವಂತೆ ಲೆಪ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಸೂಚಿಸಿದ್ದಾರೆ. ಈ ಕ್ರಮದಿಂದ ದೆಹಲಿಯ ಎಲ್ಲಾ ಕಂದಾಯ ಇಲಾಖೆಯಲ್ಲಿರುವ ಎಲ್ಲಾ 22 ಸಬ್- ರಿಜಿಸ್ಟಾರ್ ಸ್ಥಾನಗಳಿಗೂ ಮಹಿಳಾ ಅಧಿಕಾರಿಗಳು ನೇಮಕವಾಗಲಿದ್ದಾರೆ.
ಕಚೇರಿಗಳಲ್ಲಿ ನಡೆಯುವ ಪಕ್ಷಪಾತ ಮತ್ತು ಜನರಿಗೆ ಆಗುವ ಕಿರುಕುಳ ತಪ್ಪಿಸಲು ಮಹಿಳೆಯರನ್ನು ನೇಮಕ ಮಾಡಲಾಗುವುದು ಎಂದು ಲೆಫ್ಟಿನೆಂಟ್ ಗವರ್ನರ್ ತಿಳಿಸಿದ್ದಾರೆ.