ಕಡಬ: ಮಾವನಿಂದಲೇ ಸೊಸೆಯ ಮೇಲೆ ಅತ್ಯಾಚಾರ ➤‌ ಗರ್ಭಿಣಿಯಾದ ಅಪ್ರಾಪ್ತ ಬಾಲಕಿ

(ನ್ಯೂಸ್ ಕಡಬ) newskadaba.com ಕಡಬ, ಸೆ.13. ಅಪ್ರಾಪ್ತ ಬಾಲಕಿಯ ಮೇಲೆ ತನ್ನ ಮಾವನೇ ಅತ್ಯಾಚಾರಗೈದ ಹಿನ್ನೆಲೆಯಲ್ಲಿ ಬಾಲಕಿಯು ಗರ್ಭಿಣಿಯಾದ ಘಟನೆ ಕಡಬ ತಾಲೂಕಿನ ಕೊಂಬಾರು ಎಂಬಲ್ಲಿ ನಡೆದಿದೆ.

ಆರೋಪಿಯ ಸಂಬಂಧಿ 17 ವರ್ಷದ ಬಾಲಕಿಯು ಆರೋಪಿಯ ಮನೆಯಲ್ಲಿದ್ದ ವೇಳೆ ಕಳೆದ ಫೆಬ್ರವರಿ ತಿಂಗಳಿನಿಂದ ನಿರಂತರವಾಗಿ ನಾಲ್ಕೈದು ಬಾರಿ ಅತ್ಯಾಚಾರಗೈದ ಪರಿಣಾಮ ಬಾಲಕಿಯು ಗರ್ಭಿಣಿಯಾಗಿದ್ದು, ಆಶಾ ಕಾರ್ಯಕರ್ತೆ ಮನೆಗೆ ಭೇಟಿ ನೀಡಿದಾಗ ವಿಷಯ ಹೊರಬಂದಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

 

Scroll to Top