ಮತ್ತೆ ಭಾರೀ ಶಬ್ದದೊಂದಿಗೆ ಕೊಡಗಿನಲ್ಲಿ ಭೂಕುಸಿತ ➤ 18 ಕುಟುಂಬಗಳ ಸ್ಥಳಾಂತರ

(ನ್ಯೂಸ್ ಕಡಬ) newskadaba.com ಕೊಡಗು, ಜು. 23. ಕೊಡಗಿನಲ್ಲಿ ಮತ್ತೆ ಭಾರೀ ಶಬ್ದದೊಂದಿಗೆ ಭೂ ಕುಸಿತ ಉಂಟಾಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

ಮದೆನಾಡು ಗ್ರಾಮದ ರಾಷ್ಟ್ರೀಯ ಹೆದ್ದಾರಿ 275ರ ಬಳಿಯ ಮದೆನಾಡು, ಜೋಡುಪಾಲ, ಮೊಣ್ಣಂಗೇರಿ ಗ್ರಾಮಸ್ಥರಲ್ಲಿ ಭೂಕಂಪನದ ಅನುಭವವಾಗಿದ್ದು, ಈ ಕಂಪನ ಮತ್ತು ಭೂಕುಸಿತದಿಂದಾಗಿ ಸ್ಥಳೀಯರಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಿದೆ. ಈಗಾಗಲೇ ಬೆಟ್ಟದ ತಪ್ಪಲಿನ 18 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

error: Content is protected !!

Join the Group

Join WhatsApp Group