ಇಚಿಲಂಪಾಡಿ: ಗುಡ್ಡ ಕುಸಿತ ➤ ಆಟೋರಿಕ್ಷಾ ಸಹಿತ 4 ದ್ವಿಚಕ್ರ ವಾಹನಗಳಿಗೆ ಹಾನಿ



(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು. 18. ಗುಡ್ಡ ಕುಸಿತಗೊಂಡ ಪರಿಣಾಮ ಆಟೋರಿಕ್ಷಾ ಹಾಗೂ ನಾಲ್ಕು ದ್ವಿಚಕ್ರ ವಾಹನಗಳು ಹಾನಿಗೊಂಡ ಘಟನೆ ಇಚಿಲಂಪಾಡಿ ಗ್ರಾಮದ ಕೊರಮೇರು ಎಂಬಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.







ಕೊರಮೇರು ನಿವಾಸಿ ನೋಣಯ್ಯ ಗೌಡ ಅವರ ಮನೆಯ ಹಿಂಬದಿ ಗುಡ್ಡ ಕುಸಿತಗೊಂಡು, ಅಲ್ಲಿಯೇ ನಿಲ್ಲಿಸಲಾಗಿದ್ದ ವಾಹನಗಳ ಮೇಲೆ ಮಣ್ಣು ಬಿದ್ದಿದೆ. ಪರಿಣಾಮ ನೋಣಯ್ಯ ಗೌಡರ ಸ್ಕೂಟರ್, ಅವರ ಸಹೋದರ ಕೇಶವ ಗೌಡರಿಗೆ ಸೇರಿದ ಅಟೋ ರಿಕ್ಷಾ, ವಸಂತ ಗೌಡ ಎಂಬವರ ಸ್ಕೂಟರ್ ಹಾಗೂ ಹೊನ್ನಪ್ಪ ಗೌಡ ಎಂಬವರ ಎರಡು ಸ್ಕೂಟರ್ ಜಖಂಗೊಂಡಿದೆ. ಸ್ಥಳಕ್ಕೆ ಕೌಕ್ರಾಡಿ ಗ್ರಾ.ಪಂ. ಸದಸ್ಯ ವಿಶ್ವನಾಥ್ ಹಾಗೂ ಗ್ರಾಮ ಸಹಾಯಕ ಅನಿಲ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top