ವಿಟ್ಲ: ಮನೆ ಮೇಲೆ ಬಿದ್ದ ಬೃಹದಾಕಾರದ ಮರ..! ➤ ಮನೆ ಸಂಪೂರ್ಣ ನಾಶ

(ನ್ಯೂಸ್ ಕಡಬ) newskadaba.com ವಿಟ್ಲ, ಜೂ. 25. ಬೃಹದಾಕಾರದ ಮರವೊಂದು ಮನೆ ಮೇಲೆ ಬಿದ್ದು ಮನೆ ಸಂಪೂರ್ಣವಾಗಿ ಹಾನಿಗೊಂಡ ಘಟನೆ ಕರೋಪಾಡಿ ಗ್ರಾಮದ ಆನೆಕಲ್ಲು ಎಂಬಲ್ಲಿ ಸಂಭವಿಸಿದೆ.


ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಆನೆಕಲ್ಲು ನಿವಾಸಿ ಅಬ್ಬಾಸ್ ಎಂಬವರ ಮನೆಯ ಮೇಲೆ ಬೃಹದಾಕಾರದ ಗೋಳಿ ಮರವೊಂದು ಉರುಳಿಬಿದ್ದಿದೆ. ತಕ್ಷಣವೇ ಮನೆಮಂದಿ ಎಲ್ಲಾ ಹೊರಗಡೆ ಓಡಿ ಬಂದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

Scroll to Top