ಒಂಭತ್ತನೇ ತರಗತಿಯ ವಿದ್ಯಾರ್ಥಿನಿ ದಿಢೀರ್ ಅಸ್ವಸ್ಥಗೊಂಡು ಮೃತ್ಯು ➤ ಹೃದಯಾಘಾತ ಶಂಕೆ



(ನ್ಯೂಸ್ ಕಡಬ) newskadaba.com ವಿಟ್ಲ, ಮೇ.18. ಒಂಭತ್ತನೆಯ ತರಗತಿಯ ವಿದ್ಯಾರ್ಥಿನಿಯೋರ್ವಳು ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿರುವ ಘಟನೆ ಮಂಗಳವಾರದಂದು ವಿಟ್ಲದಲ್ಲಿ ನಡೆದಿದೆ.







ಮೃತ ವಿದ್ಯಾರ್ಥಿನಿಯನ್ನು ವಿಟ್ಲದ ಅಳಿಕೆ ಗ್ರಾಮದ ಚಂದಾಡಿ ನಿವಾಸಿ ವಿನಯ್ ಹೆಗ್ಡೆ ಹಾಗೂ ಸಾಯಿಗೀತಾ ದಂಪತಿಗಳ ಏಕೈಕ ಪುತ್ರಿ, ವಿಟ್ಲ ಜೆಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂಭತ್ತನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅನ್ವಿತ ಹೆಗ್ಡೆ ಎಂದು ಗುರುತಿಸಲಾಗಿದೆ. ಮಂಗಳವಾರದಂದು ದಿಢೀರ್ ಅಸ್ವಸ್ತಗೊಂಡು ಮೃತಪಟ್ಟಿದ್ದು, ಹೃದಯಾಘಾತದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.






 

 

error: Content is protected !!
Scroll to Top