ಪುತ್ತೂರು: ಆಕ್ಟಿವಾ ಮತ್ತು ಟಿಪ್ಪರ್ ನಡುವೆ ಢಿಕ್ಕಿ ➤ ಚಾಕೋಲೇಟ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಮೃತ್ಯು

(ನ್ಯೂಸ್ ಕಡಬ) Newskadaba.com ಪುತ್ತೂರು, ಅ. 30. ಆಕ್ಟಿವಾ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟ ಘಟನೆ ಪಡೀಲ್ ನಲ್ಲಿ ನಡೆದಿದೆ.


ಮೃತರನ್ನು ಚಾಕೋಲೇಟ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ವಿದ್ಯಾ ಕಣ್ವತೀರ್ಥ(46) ಎಂದು ಗುರುತಿಸಲಾಗಿದೆ. ಇವರು ತೆರಳುತ್ತಿದ್ದ ಆಕ್ಟಿವಾ ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡ ವಿದ್ಯಾರವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Scroll to Top