33 ಕೆವಿ ವಿದ್ಯುತ್ ಮಾರ್ಗದ ನಿಯತಕಾಲಿಕ ಪಾಲನಾ ಕಾರ್ಯದ ಹಿನ್ನೆಲೆ ➤ ಇಂದು ಪುತ್ತೂರು, ಕಡಬ, ಸುಬ್ರಹ್ಮಣ್ಯ ಮಾರ್ಗದ ವಿದ್ಯುತ್ ನಿಲುಗಡೆ

(ನ್ಯೂಸ್ ಕಡಬ) newskadaba.com ಕಡಬ, ಆ.26. ಪುತ್ತೂರು – ಕಡಬ – ಸುಬ್ರಹ್ಮಣ್ಯ 33ಕೆವಿ ವಿದ್ಯುತ್ ಮಾರ್ಗದ ನಿಯತಕಾಲಿಕ ಪಾಲನಾ ಕಾರ್ಯ ನಿಮಿತ್ತ ಇಂದು (ಆ.26) ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ 33 ಕೆವಿ ಪುತ್ತೂರು, ಕಡಬ, ಸುಬ್ರಹ್ಮಣ್ಯ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಆದ್ದರಿಂದ 33 ಕೆವಿ ಸುಬ್ರಹ್ಮಣ್ಯ, ನೆಲ್ಯಾಡಿ, ಸವಣೂರು, ಕಡಬ ಮತ್ತು ಬಿಂದು ಫ್ಯಾಕ್ಟರಿ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್ ಗಳಿಂದ ವಿದ್ಯುತ್ ಸರಬರಾಜು ಆಗುವ ವಿದ್ಯುತ್ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

 

 

 

Scroll to Top