ಮೆಡಿಕಲ್​, ಎಂಜಿನಿಯರಿಂಗ್​ ಕೋರ್ಸ್​​​​ಗೆ CET ಅಂಕ ಮಾತ್ರ ಪರಿಗಣನೆ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.08: ಮೆಡಿಕಲ್​, ಡೆಂಟಲ್ ಹಾಗೂ ಎಂಜಿನಿಯರಿಂಗ್ ಕೋರ್ಸ್​​ ಸೇರುವ ವಿದ್ಯಾರ್ಥಿಗಳಿಗೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಪಿಯುಸಿ ಗ್ರೇಡಿಂಗ್​ ಅಂಕವನ್ನು ಗಣನೆಗೆ ತೆಗೆದುಕೊಳ್ಳಲ್ಲ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದ್ದಾರೆ.

 

ಸಚಿವ ಸುರೇಶ್​ ಕುಮಾರ್​ ನೀಡಿದ್ದ ಸಲಹೆ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಆಗಸ್ಟ್​ 28, 29 ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಎಲ್ಲಾ ವಿಜ್ಞಾನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು ಎಂದು ಮಾಹಿತಿ ನೀಡಿದರು.ಜೂನ್ 15 ರಿಂದ ಸಿಇಟಿಗೆ ರಿಜಿಸ್ಟರ್ ಮಾಡೋಕೆ ಅವಕಾಶ ಪ್ರಾರಂಭವಾಗಲಿದೆ. ಈ ವರ್ಷ 6.5 ಲಕ್ಷ ಪಿಯುಸಿ ವಿದ್ಯಾರ್ಥಿಗಳಿಗೆ ಸೀಟು ಬೇಕು. ಇದಕ್ಕೆ ಅಗತ್ಯ ಸೀಟು ಹೆಚ್ಚಳ ಮಾಡಲು ಕ್ರಮ ತೆಗೆದುಕೊಳ್ತೀವಿ. ಪ್ರತಿ ವಿಷಯಕ್ಕೂ 60 ಅಂಕಗಳಿರುತ್ತವೆ ಎಂದು ಹೇಳಿದರು.

error: Content is protected !!

Join the Group

Join WhatsApp Group