ಕಡಬ ಸಿಎ ಬ್ಯಾಂಕ್ ಸಿಇಓ ಚಾಕೋ ಅವರಿಗೆ ಮಾತೃ ವಿಯೋಗ ➤ ಶತಾಯುಷಿ ಮರಿಯಮ್ಮ ಮಾಥನ್ ವಿಧಿವಶ

(ನ್ಯೂಸ್ ಕಡಬ) newskadaba.com ಕಡಬ, ಮೇ.26. ಕಡಬ ಪ್ರಾಥಮಿಕ ಕೃಷಿ ಪತ್ತಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಾಕೋ ಕೆ.ಎಂ ಅವರ ತಾಯಿ, ಕೋಡಿಂಬಾಳ ಗ್ರಾಮದ ಕನ್ನುಕುಝಿಯಿಲ್ ನಿವಾಸಿ, ಶತಾಯುಷಿ ಮರಿಯಾಮ್ಮ ಮಾಥನ್(101) ಅವರು ಬುಧವಾರದಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ಕುರಿಯನ್, ಚಾಕೋ, ಅಬ್ರಹಾಂ, ಪುತ್ರಿಯರಾದ ಸಾರಾ ಮಾಥ್ಯೂ, ಅನ್ನಮ್ಮ, ಸೂಸಮ್ಮ ಮತ್ತಾಯಿ, ಲಿಸ್ಸಿಜೋಸ್ , ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಕೋಡಿಂಬಾಳ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚಿನ ಸ್ಮಶಾನದಲ್ಲಿ ನೆರವೇರಿತು.

 

 

Scroll to Top