ರಾಜ್ಯದಾದ್ಯಂತ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ➤ ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡದ ಬಿಸಿ ಮುಟ್ಟಿಸಿದ ಕಡಬ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಮಾ. 22. ರಾಜ್ಯದಾದ್ಯಂತ ಕೊರೋನಾ ಆತಂಕ ಹೆಚ್ಚಾಗುತ್ತಿದ್ದರೂ ಜನರು ಮಾತ್ರ ಮಾಸ್ಕ್ ಧರಿಸದೇ ದಿನನಿತ್ಯ ಓಡಾಡುತ್ತಿರುವ ಹಿನ್ನೆಲೆ ಇದೀಗ ಕಡಬ ಎಸ್.ಐ ರುಕ್ಮ ನಾಯಕ್ ನೇತೃತ್ವದ ತಂಡವು ಫೀಲ್ಡ್ ಗೆ ಇಳಿದಿದ್ದಾರೆ.

ಕಡಬದ ಮುಖ್ಯ ಪೇಟೆಯ ಸಹಿತ ವಿವಿಧೆಡೆ ಇರುವ ಅಂಗಡಿಗಳಿಗೆ ತೆರಳಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಲ್ಲದೇ ಮಾಸ್ಕ್ ಹಾಕದೇ ಓಡಾಡುವವರಿಗೆ ದಂಡ ಹಾಕುವ ಮೂಲಕ ಎಚ್ಚರಿಕೆಯನ್ನೂ ನೀಡಿದ್ದಾರೆ.

Scroll to Top