ಬೆಳ್ತಂಗಡಿ: ಹೆಂಡತಿಯನ್ನೇ ಕೊಲೆಗೈದ ಭೂಪ..!



(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 08. ಪತಿಯೋರ್ವ ಹೆಂಡತಿಯನ್ನೇ ಹೊಡೆದು ಕೊಂದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.





ಆರೋಪಿಯನ್ನು ಜಾನ್ಸನ್ (47) ಎಂದು ಗುರುತಿಸಲಾಗಿದೆ. ಈತ ಪತ್ನಿ ಕೇರಳ ಮೂಲದ ಸೌಮ್ಯಾ ಜಾನ್ಸನ್ ಳಿಗೆ ಮರದ ತುಂಡಿನಿಂದ ಹುಬ್ಬಿನ ಜಾಗಕ್ಕೆ ಹೊಡೆದಿದ್ದಲ್ಲದೆ ತಲೆಯ ಹಿಂದಿನ ಭಾಗಕ್ಕೆ ಬಲವಾದ ಏಟು ಕೊಟ್ಟು ಕೊಲೆ ಮಾಡಿದ್ದಾನೆಂದು ಆಕೆಯ ಸಹೋದರ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ. ಪ್ರತೀದಿನ ಕುಡಿದು ಬಂದು ಈತ ಮನಯಲ್ಲಿ ಜಗಳಕ್ಕಿಳಿಯುತ್ತಿದ್ದ ಮತ್ತು ಆಕೆಯ ಮೇಲೆ ಸದಾ ಸಂಶಯ ಪಡುತ್ತಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಕೂಡಾ ಇದೇ ರೀತ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top