ಕಡಬ: ಜ್ಯೂಸ್ ಕುಡಿಯಲು ಬಂದ ಹುಡುಗಿಯ ಫೋಟೋ ಸ್ಟೇಟಸ್ ಹಾಕಿದ ಪ್ರಕರಣ ➤ ಆರೋಪಿಯ ವಿರುದ್ಧ ಸೈಬರ್ ಕ್ರೈಮ್ ಕಾಯ್ದೆಯಡಿ ಕೇಸ್



(ನ್ಯೂಸ್ ಕಡಬ) newskadaba.com ಕಡಬ, ಜ.03. ಜ್ಯೂಸ್ ಕುಡಿಯಲೆಂದು ಬಂದಿದ್ದ ಅಪ್ರಾಪ್ತ ಬಾಲಕಿಯ ಫೋಟೋ ತೆಗೆದು ವಾಟ್ಸ್ಅಪ್ ಸ್ಟೇಟಸ್ ಹಾಕಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿರುವ ಕಡಬ ಠಾಣಾ ಪೊಲೀಸರು ಸೈಬರ್ ಕ್ರೈಂ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





ಆರೋಪಿ ಯಾಕೂಬ್ ಜ್ಯೂಸ್ ಸೆಂಟರ್ ಗೆ ಬಂದಿದ್ದ ಅಪ್ರಾಪ್ತ ಬಾಲಕಿಯ ಫೋಟೋ ತೆಗೆದು ತನ್ನ ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕಿ ಆ ಬಳಿಕ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಅಂಗಡಿ ಬಳಿ ಜಮಾಯಿಸಿ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಘಟನೆಗೆ ಸಂಬಂಧಿಸಿ ಅಂಗಡಿ ಮಾಲಕ ಯಾಕೂಬ್ ನನ್ನು ಕಡಬ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






error: Content is protected !!
Scroll to Top