ಆನ್ ಲೈನ್ ತರಗತಿ ಬಂದ್ ಮಾಡಿ ,ನಾಳೆ ಭಾರತ್ ಬಂದ್ ಗೆ ಬೆಂಬಲ

(ನ್ಯೂಸ್ ಕಡಬ) newskadaba.com ಬೆಂಗಳೂರುಡಿ. 07: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಂಗಳವಾರ ನಡೆಯಲಿರುವ ಭಾರತ್ ಬಂದ್ ಗೆ ರಾಜ್ಯ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟವೂ ಬೆಂಬಲ ನೀಡಿದ್ದು, ಒಂದು ದಿನದ ಮಟ್ಟಿಗೆ ಆನ್ ಲೈನ್ ತರಗತಿಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

Xl

ರೈತ ಸಂಘಟನೆಗಳಿಗೆ ಬೆಂಬಲ ಕೊಟ್ಟು ನಾವು ಕೂಡ ಬಂದ್ ಮಾಡಲು ನಿರ್ಧರಿಸಿದ್ದು, ಮಂಗಳವಾರ ಒಂದು ದಿನ ಆನ್ ಲೈನ್ ತರಗತಿಗಳು ನಡೆಯುವುದಿಲ್ಲ. ಆದರೆ ಆನ್ ಲೈನ್ ಪರೀಕ್ಷೆಗಳು ನಿಗದಿಯಾಗಿದ್ದರೆ ಅವುಗಳು ಮಾತ್ರ ನಡೆಯಲಿದೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಹೇಳಿದ್ದಾರೆ. ಮಂಗಳವಾರದ ಭಾರತ್ ಬಂದ್ ಗೆ ದೇಶದ ಒಟ್ಟು 40 ರೈತ ಸಂಘಟನೆಗಳು ಕರೆ ನೀಡಿದೆ. ಕಾಂಗ್ರೆಸ್, ಟಿಎಂಸಿ ಸೇರಿ ಎಂಟು ಪ್ರಮುಖ ಪಕ್ಷಗಳು ಕೂಡಾ ಬೆಂಬಲ ಸೂಚಿಸಿದೆ.

Also Read  ಶಬರಿಮಲೆ ಪ್ರವೇಶಿಸಿ ಮನೆಗೆ ಬಂದ ಕನಕದುರ್ಗಾಗೆ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು► ತೀವ್ರ ಅಸ್ವಸ್ಥ ಆಸ್ಪತ್ರೆಗೆ ದಾಖಲು

Xl

error: Content is protected !!
Scroll to Top