ಎಸ್ಡಿಪಿಐ ಬಡಗಜೆಕಾರು ಗ್ರಾಮ ಸಮಿತಿ ➤ ಗ್ರಾ.ಪಂ. ಚುನಾವಣಾ ಅಭ್ಯರ್ಥಿ ಘೋಷಣಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ. 10. ಮುಂಬರುವ ಪಂಚಾಯತ್ ಚುನಾವಣೆಯ ಬಡಗಕಜೆಕಾರು ಗ್ರಾಮದ ಪಕ್ಷದ ಅಭ್ಯರ್ಥಿಗಳ ಘೋಷಣಾ ಕಾರ್ಯಕ್ರಮವು ಪಾಂಡವರಕಲ್ಲುವಿನ ಸಮುದಾಯ ಭವನದಲ್ಲಿ ಶುಕ್ರವಾರದಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಕಾವಳ ಪಡೂರು- ಮೂಡೂರು ವಲಯಾಧ್ಯಕ್ಷರಾದ ಅಬೂಬಕ್ಕರ್ ಮದ್ದ ವಹಿಸಿದ್ದರು. ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಯೂಸುಫ್ ಆಲಡ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿ ಅಭ್ಯರ್ಥಿ ಘೋಷಣೆ ಮಾಡಿದರು. ಎಸ್ಡಿಪಿಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಪರಂಗಿಪೇಟೆ ಸಂದೇಶ ಭಾಷಣ ಮಾಡಿದರು. ಜಮಾಅತ್ ನ ಮಾಜಿ ಮುಖಂಡರೂ, ಸಾಮಾಜಿಕ ಕಾರ್ಯಕರ್ತರೂ ಆದ ಉಮರ್ ಕೆ.ಪಿ ಮುಸ್ಲಿಯಾರ್ ಪಕ್ಷದ ಸಿದ್ಧಾಂತ ಮತ್ತು ತತ್ವವನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಗೊಂಡು ಒಂದೆರಡು ಹಿತವನ್ನು ನುಡಿದರು.

ಪ್ರಥಮ ಹಂತದಲ್ಲಿ ಎರಡು ವಾರ್ಡ್ ಗಳಲ್ಲಿ ಸ್ಪರ್ಧಿಸುವುದಾಗಿ ತೀರ್ಮಾನಿಸಲಾಗಿದೆ.

ಅಭ್ಯರ್ಥಿ ಪಟ್ಟಿ ಪ್ರಕಟ:
86 ವಾರ್ಡ್ (2 ಅಭ್ಯರ್ಥಿ) – ಅಥಾವುಲ್ಲಾ ಕೆದಿಲೆ
ಸಮೀರಾ w/o ಹನೀಫ್ ಕೊಮಿನಡ್ಕ
87 ವಾರ್ಡ್ -(1 ಅಭ್ಯರ್ಥಿ) ನಸೀಮಾ w/o ಹಂಝ ಪಾಂಡವರಕಲ್ಲು

ಎಸ್ಡಿಪಿಐ ಬಡಗಕಜೆಕಾರು ಗ್ರಾಮ ಸಮಿತಿ ಅಧ್ಯಕ್ಷರಾದ ಅಥಾವುಲ್ಲಾ ಕೆದಿಲೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಎಸ್ಡಿಪಿಐ ಬಡಗಕಜೆಕಾರು ಗ್ರಾಮ ಸಮಿತಿ ಉಪಾಧ್ಯಕ್ಷ ಉಸ್ಮಾನ್ ಕೆಪಿ, ಕಾರ್ಯದರ್ಶಿ ಹನೀಫ್ ಕೊಮಿನಡ್ಕ ಉಪಸ್ಥಿತರಿದ್ದರು. ಇಮ್ರಾನ್ ಪಾಂಡವರಕಲ್ಲು ನಿರೂಪಿಸಿ, ಧನ್ಯವಾದಗೈದರು.

error: Content is protected !!

Join the Group

Join WhatsApp Group