(ನ್ಯೂಸ್ ಕಡಬ) newskadaba.com ಮಂಗಳೂರು. ಜೂ. 2, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮೂರು ವರ್ಷದ ಮಗು ಸೇರಿದಂತೆ ಹನ್ನೊಂದು ಮಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.
ಕೋವಿಡ್ – 19 ಪತ್ತೆಯಾದವರೆಲ್ಲರೂ ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ ನಲ್ಲಿದ್ದವರೆನ್ನಲಾಗಿದ್ದು, 7 ಮಂದಿ ಮಹಿಳೆಯರು ಹಾಗೂ 4 ಮಂದಿ ಪುರುಷರಾಗಿದ್ದಾರೆ. ಸೋಂಕಿತರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ.