ಸುಳ್ಯ: ಬೈಕ್ ಸ್ಕಿಡ್ ಆಗಿ ರಸ್ತೆಗೆಸೆಯಲ್ಪಟ್ಟ ಸವಾರರು ➤ ಇಬ್ಬರು ಸ್ಥಳದಲ್ಲೇ ಮೃತ್ಯು



(ನ್ಯೂಸ್ ಕಡಬ) newskadaba.com ಸುಳ್ಯ, ಜ.22. ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರರು ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟ ಘಟನೆ ಸುಳ್ಯದಲ್ಲಿ ಬುಧವಾರದಂದು ಸಂಭವಿಸಿದೆ.





ಮೃತ ಸವಾರರನ್ನು ಉತ್ತರಪ್ರದೇಶದ ಮುಜಾಫರ್ ನಗರದ ನಿವಾಸಿಗಳಾದ ಡ್ಯಾನಿಶ್ ಮತ್ತು ಅಜ್ಮಲ್ ಎಂದು ಗುರುತಿಸಲಾಗಿದೆ. ಮೃತರು ಕೂಲಿ ಕಾರ್ಮಿಕರಾಗಿದ್ದು, ಸುಳ್ಯದಿಂದ ಸಾರಣೆ ಕೆಲಸಕ್ಕೆಂದು ಪಳ್ಳತ್ತಡ್ಕ ಕಡೆಗೆ ತೆರಳುತ್ತಿದ್ದ ವೇಳೆ ಅಜ್ಜಾವರ ಗ್ರಾಮದ ಮೇನಾಲ ಎಂಬಲ್ಲಿ ಬೈಕ್ ಸ್ಕಿಡ್ ಆಗಿ ಈ ಅಪಘಾತ ಸಂಭವಿಸಿದೆ. ಬೈಕ್ ಲಾರಿಗೆ ಗುದ್ದಿ ಮಗುಚಿಬಿದ್ದಿದೆ.






error: Content is protected !!
Scroll to Top