ಕೊಯಿಲ: ಜೀಪು – ಕಾರು ಢಿಕ್ಕಿ ► ಆರು ಮಂದಿಗೆ ಗಾಯ, ಜೀಪು ಪಲ್ಟಿ

(ನ್ಯೂಸ್ ಕಡಬ) newskadaba.com ಕೊಯಿಲ, ಆ.20. ಉಪ್ಪಿನಂಗಡಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೊಯಿಲ ಫಾರಂ ಬಳಿ ಜೀಪು ಹಾಗೂ ಸ್ವಿಫ್ಟ್ ಕಾರು ನಡುವೆ ಢಿಕ್ಕಿ ಸಂಭವಿಸಿ ಆರು ಮಂದಿ ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ.

ಅಪಘಾತದಲ್ಲಿ ಎರಡೂ ವಾಹನಗಳಲ್ಲಿದ್ದ ಆರು ಪ್ರಯಾಣಿಕರು ಗಾಯಗೊಂಡಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ‌ ರಭಸಕ್ಕೆ ಜೀಪು ಪಲ್ಟಿಯಾಗಿದ್ದು, ರಸ್ತೆಗಡ್ಡವಾಗಿ ಬಿದ್ದಿದೆ.

Scroll to Top