ಬೆಳಂದೂರು ಪ್ರಥಮ ದರ್ಜೆ ಕಾಲೇಜು ಹಿರಿಯ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ ➤ ಸಂಘದ ಅಧ್ಯಕ್ಷರಾಗಿ ಜಗದೀಶ್ ಕೆಡೆಂಜಿ

(ನ್ಯೂಸ್ ಕಡಬ) newskadaba.com ಕಡಬ, .22. ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ   ಅಧ್ಯಕ್ಷರಾಗಿ  ಜಗದೀಶ್ ಕೆಡೆಂಜಿ ,ಉಪಾಧ್ಯಕ್ಷರಾಗಿ ಉಮೇಶ್ ಪಳ್ಳತ್ತಾರು, ಕಾರ್ಯದರ್ಶಿಯಾಗಿ ನಾಗವೇಣಿ ಬೆದ್ರಾಜೆ, ಜತೆ ಕಾರ್ಯದರ್ಶಿಯಾಗಿ ಸವಿತಾ ಬೊಣ್ಯಕುಕ್ಕು ಪೆರುವಾಜೆ, ಕೋಶಾಧಿಕಾರಿಯಾಗಿ ಪುನೀತ್ ಡಿ ಕಲ್ಪಡ, ಸಲಹಾ ಸಮಿತಿ ಸದಸ್ಯರಾಗಿ ಶುಭಲಕ್ಷ್ಮೀ ಬರೆಪ್ಪಾಡಿ, ಮೇದಿನಿರಾಜ್ ನೂಚಿಲ, ಆಶಿಕ್ ಕೆ ಬೆಳಂದೂರು, ಮಿಥುನ್ ಹೇಮಳ, ಹರ್ಷಿತ್ ಬಿ.ಕೆ ಕುಮಾರಮಂಗಲ, ದುರ್ಗಾಪ್ರಸಾದ್ ಮರಕ್ಕಡ, ದೀಕ್ಷಿತ್ ಮುಂಡಾಳ  ಆಯ್ಕೆಯಾಗಿದ್ದಾರೆ.

ಕಾಲೇಜಿನ  ಪ್ರಾಚಾರ್ಯ ಪ್ರೊ.ಪದ್ಮನಾಭ. ಕೆ ನೆಟ್ಟಾರು ಅಧ್ಯಕ್ಷತೆಯಲ್ಲಿ ಈ ಆಯ್ಕೆ ನಡೆಯಿತು.  ಕಾಲೇಜಿನ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಸಂತೋಷ್ ಮರಕ್ಕಡ, ಪೆರುವಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ರಾಘವ.ಎನ್, ಹಿರಿಯ ವಿದ್ಯಾರ್ಥಿ ಸಂಘದ ಸಂಚಾಲಕ ಡಾ|ರವಿಚಂದ್ರ ನಾಯ್ಕ , ಸ್ವಾಮಿ ಎಸ್ , ಮಮತಾ ಯು ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿಗಳಾದ ಮುನಿರಾ, ನಾಗವೇಣಿ, ಶುಭಲಕ್ಷ್ಮಿ, ಸವಿತಾ,  ಉಮೇಶ,  ಮೆದೀನಿ ರಾಜ್ ಅನಿಸಿಕೆ ವ್ಯಕ್ತಪಡಿಸಿದರು.  ಕಾಲೇಜಿನ ಗ್ರಂಥಪಾಲಕ ಡಾ|ರವಿಚಂದ್ರ ನಾಯ್ಕ ಸ್ವಾಗತಿಸಿದರು. ಕಾಲೇಜಿನ ಉಪನ್ಯಾಸಕ ಸ್ವಾಮಿ.ಎಸ್ ವಂದಿಸಿದರು. ಶೋಭಾ ಕಾರ್ಯಕ್ರಮ ನಿರೂಪಿಸಿದರು.

Also Read  ಕಡಬ: ಶಾಲಾ ಬಾಲಕಿಯನ್ನು ಕಾರು ಚಾಲಕ ಹಿಂಬಾಲಿಸಿದ ಪ್ರಕರಣಕ್ಕೆ ಟ್ವಿಸ್ಟ್ ➤ ಅಲ್ಲಿ ನಡೆದಿದ್ದೇ ಬೇರೆ

error: Content is protected !!
Scroll to Top