ಕುಂತೂರು ಸಿಡಿಲು ಬಡಿದು ಮನೆಗೆ ಹಾನಿ ►ಲಕ್ಷಾಂತರ ರೂ. ನಷ್ಟ



(ನ್ಯೂಸ್ ಕಡಬ) newskadaba.com ಕಡಬ, ಅ.14. ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಗೋಡೆ ಕುಸಿದು ಮೇಲ್ಛಾವಣಿ ಹಾನಿಗೀಡಾಗಿದ್ದು, ಇಲೆಕ್ಟ್ರಾನಿಕ್ ವಸ್ತುಗಳು ಸ್ಫೋಟಗೊಂಡು ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಕುಂತೂರು ಸಮೀಪದ ಪೆರಾಬೆಯಲ್ಲಿ ಶನಿವಾರ ರಾತ್ರಿ ನಡೆದಿದೆ.







ಪೆರಾಬೆ ಗ್ರಾಮದ ತೋಟ ಮನೆ ಎಂ.ಎಂ. ಮಹಮ್ಮದ್ ಎಂಬವರಿಗೆ ಸೇರಿದ ಮನೆಗೆ ಶನಿವಾರ ರಾತ್ರಿ ಸಿಡಿಲು ಬಡಿದಿದ್ದು, ಮನೆಯಲ್ಲಿದ್ದ ಟಿವಿ, ಇನ್ವರ್ಟರ್ ಸ್ಫೋಟಗೊಂಡಿದ್ದು, ವಯರಿಂಗ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಮನೆಯ ಒಂದು ಪಾರ್ಶ್ವದ ಗೋಡೆಯು ಕುಸಿದಿದ್ದು, ಮೇಲ್ಛಾವಣಿ ಹಾನಿಗೀಡಾಗಿದೆ. ಈ ಸಂದರ್ಭದಲ್ಲಿ ಮನೆ ಮಂದಿ ಹೊರಗಿನ ಕೊಠಡಿಯಲ್ಲಿ ಇದ್ದುದರಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳು ಕಡಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.






error: Content is protected !!
Scroll to Top