(ನ್ಯೂಸ್ ಕಡಬ) newskadaba.com ಕಡಬ, ಜು.24. ವೃದ್ಧೆಯೋರ್ವರು ನೀರಿಗೆ ಬಿದ್ದು ಮೃತಪಟ್ಟ ಘಟನೆ ಠಾಣಾ ವ್ಯಾಪ್ತಿಯ ಕೋಡಿಂಬಾಳದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಮೃತರನ್ನು ಕೋಡಿಂಬಾಳ ಗ್ರಾಮದ ದಾಸಗುಡ್ಡೆ ನಿವಾಸಿ ಅಣ್ಣಿ ಮಡಿವಾಳ ಎಂಬವರ ಪತ್ನಿ ಸೀತಾ(70) ಎಂದು ಗುರುತಿಸಲಾಗಿದೆ. ಈಕೆ ಹುಲ್ಲು ತರಲೆಂದು ಸೋಮವಾರ ಮಧ್ಯಾಹ್ನ ತೋಟಕ್ಕೆ ತೆರಳಿದ್ದು ವಾಪಾಸ್ಸು ಮನೆಗೆ ಬರದ ಕಾರಣ ಹುಡುಕಾಡಿದಾಗ ಕೋಡಿಂಬಾಳ ಗ್ರಾಮದ ಬರೆಂಗಾಯಿ ಎಂಬಲ್ಲಿ ಕೊಪ್ಪ ತೋಡಿನಲ್ಲಿ ನೀರಿನಲ್ಲಿ ಪೊದರುಗಳ ಮಧ್ಯೆ ಸಿಕ್ಕಿಹಾಕಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಈ ಬಗ್ಗೆ ಮೃತರ ಪುತ್ರ ವಿಠಲ ಸಾಲ್ಯಾನ್ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










