ಮಂಗಳೂರು: ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಪೊಲೀಸ್ ಚಾಟಿ; ₹6 ಲಕ್ಷಕ್ಕೂ ಅಧಿಕ ದಂಡ ವಸೂಲಿ!



(ನ್ಯೂಸ್‌ ಕಡಬ) newskadaba.com,  ಆ.14 ಮಂಗಳೂರು: ನಗರದಲ್ಲಿ ಸುಗಮ ವಾಹನ ಸಂಚಾರ, ಪಾದಚಾರಿಗಳ ಸುರಕ್ಷತೆ ಹಾಗೂ ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.







ಜೂನ್ 2026 ರಿಂದ ಇದುವರೆಗೆ ನೋ ಪಾರ್ಕಿಂಗ್, ಫುಟ್‌ಪಾತ್ ಪಾರ್ಕಿಂಗ್, ಡಬಲ್ ಪಾರ್ಕಿಂಗ್ ಸೇರಿದಂತೆ ಒಟ್ಟು 7,490 ಪ್ರಕರಣಗಳು ದಾಖಲಾಗಿದ್ದು, ₹3,07,600 ದಂಡ ವಸೂಲಿ ಮಾಡಲಾಗಿದೆ (ಇದರಲ್ಲಿ 1,080 ಫುಟ್‌ಪಾತ್ ಪಾರ್ಕಿಂಗ್ ಪ್ರಕರಣಗಳು ಸೇರಿವೆ).






ನಂಬರ್ ಪ್ಲೇಟ್ ಕಾರ್ಯಾಚರಣೆ (ಆಗಸ್ಟ್ 04 – 12)..ದೋಷಪೂರಿತ ನಂಬರ್ ಪ್ಲೇಟ್: 258 ಪ್ರಕರಣಗಳು, ನಂಬರ್ ಪ್ಲೇಟ್ ಇಲ್ಲದ ವಾಹನಗಳು: 74 ಪ್ರಕರಣಗಳು ಹಾಗೂ ಒಟ್ಟು 332 ಪ್ರಕರಣಗಳಿಂದ ₹3,01,000 ದಂಡ ವಿಧಿಸಲಾಗಿದೆ.

ಪ್ರತಿಯೊಬ್ಬ ವಾಹನ ಮಾಲೀಕರು ಕಡ್ಡಾಯವಾಗಿ ನಿಯಮಾನುಸಾರ HSRP (ಹೆಚ್.ಎಸ್.ಆರ್.ಪಿ) ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು. ಮುಂಬರುವ ದಿನಗಳಲ್ಲೂ ಈ ಕಾರ್ಯಾಚರಣೆ ಮುಂದುವರಿಯಲಿದ್ದು, ಸಾರ್ವಜನಿಕರು ಸಂಚಾರ ನಿಯಮ ಪಾಲಿಸಿ ಸಹಕರಿಸಲು ಕೋರಲಾಗಿದೆ.

error: Content is protected !!
Scroll to Top