(ನ್ಯೂಸ್ ಕಡಬ) newskadaba.com, ಜೂ.30 :ಮೆಟಾ ಮಾಲೀಕತ್ವದ ಜಗತ್ತಿನ ಪ್ರಮುಖ ಮೆಸೇಜಿಂಗ್ ಆ್ಯಪ್ ‘ವಾಟ್ಸಾಪ್’ ತನ್ನ ಬಳಕೆದಾರರ ಸುರಕ್ಷತೆಗಾಗಿ ಮಹತ್ವದ ‘ಯೂಸರ್ ನೇಮ್’ ವೈಶಿಷ್ಟ್ಯವನ್ನು ಅಧಿಕೃತವಾಗಿ ಘೋಷಿಸಿದೆ.
ಇನ್ಮುಂದೆ ಬಳಕೆದಾರರು ಇತರರೊಂದಿಗೆ ಚಾಟ್ ಮಾಡಲು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳುವ ಅಗತ್ಯವಿರುವುದಿಲ್ಲ. ಬದಲಿಗೆ ತಮ್ಮದೇ ಆದ ವಿಶಿಷ್ಟ ಯೂಸರ್ ನೇಮ್ ಬಳಸಬಹುದು.ದೊಡ್ಡ ಗ್ರೂಪ್‌ಗಳಿಗೆ ಸೇರಿದಾಗ ಅಥವಾ ಅಪರಿಚಿತರಿಗೆ ಮೊದಲ ಬಾರಿಗೆ ಸಂದೇಶ ಕಳುಹಿಸುವಾಗ ಫೋನ್ ಸಂಖ್ಯೆಗಳು ಸ್ವಯಂಚಾಲಿತವಾಗಿ ಹೈಡ್ ಆಗಲಿವೆ.
ಇನ್‌ಸ್ಟಾಗ್ರಾಮ್ ಮಾದರಿಯಲ್ಲಿ ವಾಟ್ಸಾಪ್‌ನಲ್ಲಿ ಯಾರನ್ನಾದರೂ ಹುಡುಕಲು ಯಾವುದೇ ಸಾರ್ವಜನಿಕ ಡೈರೆಕ್ಟರಿ ಇರುವುದಿಲ್ಲ. ನಿಮ್ಮನ್ನು ಸಂಪರ್ಕಿಸಬೇಕಾದರೆ ಅವರಿಗೆ ನಿಮ್ಮ ನಿಖರವಾದ ಯೂಸರ್ ನೇಮ್ ತಿಳಿದಿರಬೇಕಾಗುತ್ತದೆ.ಇದೇ ವೇಳೆ ಪ್ರಸಿದ್ಧ ಫಿನ್‌ಟೆಕ್ ಸಂಸ್ಥೆ ‘CRED’ ಸ್ಥಾಪಕ ಕುನಾಲ್ ಶಾ ಅವರನ್ನು ವಾಟ್ಸಾಪ್‌ನ ನೂತನ ಜಾಗತಿಕ ಮುಖ್ಯಸ್ಥರನ್ನಾಗಿ ಮೆಟಾ ನೇಮಕ ಮಾಡಿದೆ.









