ಪುತ್ತೂರು: ಬೈಕ್ ಸವಾರರೇ ಎಚ್ಚರ! ಮೈಲೇಜ್ ಡಿವೈಸ್ ಅಳವಡಿಸುವ ನೆಪದಲ್ಲಿ ಹಣ ಪೀಕುತ್ತಿರುವ ಗ್ಯಾಂಗ್



(ನ್ಯೂಸ್ಕಡಬ) newskadaba.com,  ಎ.13:  ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಸವಾರರನ್ನು ತಡೆದು, ಬೈಕ್‌ಗೆ ಹೆಚ್ಚಿನ ಮೈಲೇಜ್ ನೀಡುವ ಸಾಧನ ಅಳವಡಿಸಿಕೊಡುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಿರುವ ಗ್ಯಾಂಗ್‌ವೊಂದರ ಬಗ್ಗೆ ವರದಿಯಾಗಿದೆ.







ಕೆಲವು ದಿನಗಳ ಹಿಂದೆ ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಅಂಡರ್‌ಪಾಸ್ ಬಳಿ ಟೈಲರ್ ಒಬ್ಬರನ್ನು ತಡೆದ ಅಪರಿಚಿತ ವ್ಯಕ್ತಿಯೊಬ್ಬ, ನಿಮ್ಮ ಬೈಕ್‌ಗೆ ಮೈಲೇಜ್ ಹೆಚ್ಚಿಸುವ ಡಿವೈಸ್ ಅಳವಡಿಸುತ್ತೇನೆ ಎಂದು ಹೇಳಿ 1,000 ರೂಪಾಯಿ ಬೇಡಿಕೆಯಿಟ್ಟಿದ್ದಾನೆ. ಈ ವಿಚಾರವಾಗಿ ಸವಾರ ಮತ್ತು ಆ ವ್ಯಕ್ತಿಯ ನಡುವೆ ಮಾತಿನ ಚಕಮಕಿ ನಡೆದಿದೆ. ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸುತ್ತಿದ್ದಂತೆ ವಂಚಕ ಅಲ್ಲಿಂದ ಪರಾರಿಯಾಗಿದ್ದಾನೆ.






ಇದೇ ಮಾದರಿಯಲ್ಲಿ ಈಗಾಗಲೇ ಹಲವು ದ್ವಿಚಕ್ರ ವಾಹನ ಸವಾರರು ಈ ಗ್ಯಾಂಗ್‌ನಿಂದ ವಂಚನೆಗೊಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಹೆದ್ದಾರಿಯಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಉಪ್ಪಿನಂಗಡಿ ಪೊಲೀಸರು ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

error: Content is protected !!
Scroll to Top