(ನ್ಯೂಸ್ ಕಡಬ) newskadaba.com, ಎ.13: ಕಡಬ/ಬೆಂಗಳೂರು: ನೀವು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ಗ್ಯಾಸ್ ಬುಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ ತಂದಿದ್ದು, ಇನ್ಮುಂದೆ ಬೇಕಾಬಿಟ್ಟಿ ಸಿಲಿಂಡರ್ ಬುಕ್ ಮಾಡಲು ಅವಕಾಶ ಇರುವುದಿಲ್ಲ. ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಉದ್ವಿಗ್ನತೆಯಿಂದಾಗಿ ತೈಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಸರಿದೂಗಿಸಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಹೊಸ ನಿಯಮಗಳ ಮುಖ್ಯಾಂಶಗಳು:
ಮಾಸಿಕ ಮಿತಿ: ಭಾರತ್ ಪೆಟ್ರೋಲಿಯಂ (BPCL) ನಿಯಮದಂತೆ, ಇನ್ಮುಂದೆ ಒಬ್ಬ ಗ್ರಾಹಕ ತಿಂಗಳಿಗೆ ಗರಿಷ್ಠ 2 ಸಿಲಿಂಡರ್ ಮಾತ್ರ ಬುಕ್ ಮಾಡಲು ಸಾಧ್ಯ. ಮಿತಿ ಮೀರಿದರೆ ವ್ಯವಸ್ಥೆಯು ಸ್ವಯಂಚಾಲಿತವಾಗಿ ಬುಕಿಂಗ್ ನಿರ್ಬಂಧಿಸಲಿದೆ.
ವಾರ್ಷಿಕ ಕೋಟಾ: ಪ್ರತಿ ಆರ್ಥಿಕ ವರ್ಷಕ್ಕೆ (ಏಪ್ರಿಲ್ 1 ರಿಂದ ಮಾರ್ಚ್ 31) ಸರ್ಕಾರವು 12 ಸಬ್ಸಿಡಿ ಸಿಲಿಂಡರ್‌ಗಳನ್ನು ನೀಡುತ್ತದೆ. ಅಗತ್ಯವಿದ್ದರೆ ಹೆಚ್ಚುವರಿಯಾಗಿ 3 ಸಬ್ಸಿಡಿ ರಹಿತ ಸಿಲಿಂಡರ್ ಸೇರಿ ವರ್ಷಕ್ಕೆ ಒಟ್ಟು 15 ಸಿಲಿಂಡರ್ ಪಡೆಯಬಹುದು.
ಬುಕಿಂಗ್ ನಡುವಿನ ಅಂತರ: ಈ ಹಿಂದೆ ಎರಡು ಬುಕಿಂಗ್‌ಗಳ ನಡುವೆ ಇದ್ದ 21 ದಿನಗಳ ಕಾಯುವ ಅವಧಿಯನ್ನು ಈಗ 25 ದಿನಗಳಿಗೆ ಏರಿಸಲಾಗಿದೆ. ಅಂದರೆ, ಒಂದು ಸಿಲಿಂಡರ್ ಪಡೆದ 25 ದಿನಗಳ ನಂತರವಷ್ಟೇ ಮುಂದಿನ ಸಿಲಿಂಡರ್ ಬುಕ್ ಮಾಡಲು ಅವಕಾಶವಿರುತ್ತದೆ.
ಹೆಚ್ಚುವರಿ ಸಿಲಿಂಡರ್ ಬೇಕಿದ್ದರೆ ‘ಪ್ರಶ್ನೆ’ಗಳಿಗೆ ಉತ್ತರಿಸಬೇಕು!
ವಾರ್ಷಿಕ 12 ಸಿಲಿಂಡರ್‌ಗಳ ಕೋಟಾ ಮುಗಿದ ನಂತರ ನಿಮಗೆ ಹೆಚ್ಚಿನ ಗ್ಯಾಸ್ ಬೇಕಾದಲ್ಲಿ, ‘Hello BPCL’ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬೇಕು.









