(ನ್ಯೂಸ್ ಕಡಬ) newskadaba.com, ಎ.13: ಕಳೆದ ವಾರಾಂತ್ಯ ತುಸು ಏರಿಕೆ ಕಂಡಿದ್ದ ಚಿನ್ನ ಬೆಳ್ಳಿ ದರದಲ್ಲಿ ಈ ವಾರದ ಆರಂಬದಲ್ಲಿ ಮತ್ತೆ ಇಳಿಕೆ ಕಂಡಿದೆ. ಅಮೆರಿಕ- ಇರಾನ್ ನಡುವೆ ಕುಸಿದು ಬಿದ್ದ ಒಪ್ಪಂದ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ.
ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ?
ಏಪ್ರಿಲ್ 13, 2026, ಸೋಮವಾರದಂದು 24 ಕ್ಯಾರೆಟ್ 10 ಗ್ರಾಂ ನಲ್ಲಿ 380 ರೂ ಇಳಿಕೆ ಆಗಿ,1,52,460 ರೂಪಾಯಿ ಬೆಲೆ ದಾಖಲಾಗಿದೆ. 1 ಗ್ರಾಂ ಬೆಲೆ ಇಂದು 38 ರೂ ಇಳಿಕೆ ಆಗಿದ್ದು, 15,246 ರೂ ದಾಖಲಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ 1 ಗ್ರಾಂ ಬೆಲೆ 35 ರೂ ಇಳಿಕೆ ಆಗಿ 13,975 ರೂ ಆಗಿದ್ದು 10 ಗ್ರಾಂ ಬೆಲೆಯಲ್ಲಿ 350 ರೂ ಇಳಿಕೆಯಾಗಿ, 1,39,750 ರೂಪಾಯಿಗೆ ತಲುಪಿದೆ.
ಬೆಳ್ಳಿ ಬೆಲೆ ಇಳಿಕೆ
ಬೆಳ್ಳಿ ಬೆಲೆ ಇಂದು 5 ರೂಪಾಯಿ ಇಳಿಕೆಯಾಗಿದ್ದು, ಗ್ರಾಂ ಬೆಲೆ 255 ರೂಪಾಯಿ ಹಾಗೂ ಕೆಜಿ ಬೆಲೆ 2,55,000 ರೂ ಬೆಲೆಗೆ ಇಳಿಕೆ ಆಗಿದೆ.
ಚಿನ್ನ-ಬೆಳ್ಳಿ ಬೆಲೆ ಏರಿಳಿತ
ಇರಾನ್-ಅಮೆರಿಕ ಸಂಘರ್ಷದ ಹಿನ್ನೆಲೆಯಲ್ಲಿ, ಡಾಲರ್ ಬೆಲೆ ಏರಿಳಿತ ಸೇರಿದಂತೆ ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರಿ ಏರುಪೇರಾಗುತ್ತಿದೆ









