ಭಾರತೀಯ ಕರಾವಳಿ ಕಾವಲು ಪಡೆ ಶಕ್ತಿ ಹೆಚ್ಚಿಸಿದ ಎಂಕೆ 3 ಹೆಲಿಕಾಪ್ಟರ್‌



(ನ್ಯೂಸ್ಕಡಬ) newskadaba.com,ಎ.11 : ದೇಶದ ಕರಾವಳಿಯ ಭದ್ರತೆಯನ್ನು ಹೆಚ್ಚಿಸಲು ಇದೀಗ ಎಂಕೆ 3 ಹೆಲಿಕಾಪ್ಟರ್‌  MK3 helicopters) ಭಾರತೀಯ ಕರಾವಳಿ ಕಾವಲು ಪಡೆಯನ್ನು ಸೇರಿಕೊಂಡಿದೆ. ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited) ಸಿದ್ದ ಪಡಿಸಿರುವ ನಾಲ್ಕು ಎಎಲ್ ಹೆಚ್ ಎಂಕೆ III (ಎಂಆರ್ ) (ALH Mk III MR) ಹೆಲಿಕಾಪ್ಟರ್‌ಗಳನ್ನು 2024 ರ ಒಪ್ಪಂದದ ಅಡಿಯಲ್ಲಿ ಭಾರತೀಯ ಕರಾವಳಿ ಕಾವಲು ಪಡೆಗೆ ಹಸ್ತಾಂತರಿಸಲಾಯಿತು. ಈ ಹೆಲಿಕಾಪ್ಟರ್ ಗಳು ಕರಾವಳಿಯಲ್ಲಿ ನಿರಂತರ ಕಣ್ಗಾವಲು, ಹುಡುಕಾಟ ಮತ್ತು ರಕ್ಷಣೆ ಕಾರ್ಯಾಚರಣೆಗಳಿಗೆ ಹೆಚ್ಚು ಅನುಕೂಲಕರವಾಗಿದೆ.







ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವತಿಯಿಂದ ಭಾರತೀಯ ಕರಾವಳಿ ಕಾವಲು ಪಡೆಗೆ (ICG) ನಾಲ್ಕು ಎಎಲ್ ಹೆಚ್ ಎಂಕೆ III ಹೆಲಿಕಾಪ್ಟರ್‌ಗಳನ್ನು ಹಸ್ತಾಂತರಿಸಲಾಯಿತು.






ಏರೋನಾಟಿಕಲ್ ಗುಣಮಟ್ಟ ಭರವಸೆ (ORDAQA) ಪ್ರಾದೇಶಿಕ ನಿರ್ದೇಶಕರ ಕಚೇರಿ ಮತ್ತು ಹೆಲಿಕಾಪ್ಟರ್ ವಿಭಾಗದ ವತಿಯಿಂದ ಕೊಚ್ಚಿ ಮತ್ತು ಪೋರಬಂದರ್ ಮೂಲದ ಕೋಸ್ಟ್ ಗಾರ್ಡ್ ಸ್ಕ್ವಾಡ್ರನ್‌ಗಳಿಗೆ ಹೆಲಿಕಾಪ್ಟರ್ ಗಳ ದಾಖಲೆಗಳನ್ನು ಔಪಚಾರಿಕವಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಹೆಚ್ ಎಎಲ್ ನ ಹೆಲಿಕಾಪ್ಟರ್ ಸಂಕೀರ್ಣದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಬಿ. ರಂಗ ರಾವ್, ಸಿಎಸ್ಒ (ವಾಯುಯಾನ) ಮತ್ತು ಕೋಸ್ಟ್ ಗಾರ್ಡ್ ಕಮಾಂಡರ್ (ಪಶ್ಚಿಮ ಸಮುದ್ರ ತೀರ) ಡಿಐಜಿ ರಾಜೇಶ್ ಮಕ್ವಾನಾ ಮತ್ತಿತರರು ಭಾಗವಹಿಸಿದ್ದರು.

error: Content is protected !!
Scroll to Top