ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ರದ್ದತಿ ಕುರಿತು ಸ್ಪಷ್ಟೀಕರಣ



(ನ್ಯೂಸ್‌ ಕಡಬ) newskadaba.com,  ಮಾ.23 : ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು ಸೇವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿಲ್ಲ; ಕೇವಲ ಮಧ್ಯಾಹ್ನದ ಪ್ಯಾಸೆಂಜರ್ ರೈಲುಗಳಾದ ರೈಲು ಸಂಖ್ಯೆ 56629 ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ (ಮಂಗಳೂರು ಸೆಂಟ್ರಲ್‌ನಿಂದ ಬೆಳಿಗ್ಗೆ 10:00 ಗಂಟೆಗೆ ಹೊರಟು ಮಧ್ಯಾಹ್ನ 12:30 ಕ್ಕೆ ಸುಬ್ರಹ್ಮಣ್ಯ ರೋಡ್ ತಲುಪುವ ರೈಲು) ಮತ್ತು ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್-ಮಂಗಳೂರು ಸೆಂಟ್ರಲ್ (ಸುಬ್ರಹ್ಮಣ್ಯ ರೋಡ್‌ನಿಂದ ಮಧ್ಯಾಹ್ನ 1:45 ಕ್ಕೆ ಹೊರಟು ಸಂಜೆ 4:25 ಕ್ಕೆ ಮಂಗಳೂರು ಸೆಂಟ್ರಲ್ ತಲುಪುವ ರೈಲು) ಇವುಗಳನ್ನು ಮಾತ್ರ 23 ಮಾರ್ಚ್ ರಿಂದ 14 ಏಪ್ರಿಲ್ 2026 ರವರೆಗೆ ಮತ್ತು 10 ಜೂನ್ ರಿಂದ 21 ಜೂನ್ 2026 ರವರೆಗೆ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ, ಉಳಿದಂತೆ ಎಲ್ಲಾ ಬೆಳಿಗ್ಗೆ ಮತ್ತು ಸಂಜೆಯ ಪ್ಯಾಸೆಂಜರ್ ಸೇವೆಗಳು ಯಾವುದೇ ಸಮಯದ ಬದಲಾವಣೆಯಿಲ್ಲದೆ ಎಂದಿನಂತೆ ಕಾರ್ಯನಿರ್ವಹಿಸಲಿವೆ.







ಪ್ರಯಾಣಿಕರೇ ಈ ಬದಲಾವಣೆಯನ್ನು ಗಮನಿಸಿ ತಮ್ಮ ಪ್ರಯಾಣದ ಯೋಜನೆಯನ್ನು ರೂಪಿಸಿಕೊಳ್ಳಬೇಕೆಂದು ವಿನಂತಿ.






error: Content is protected !!
Scroll to Top