ಐರ್ಲೆಂಡ್‌ನಲ್ಲಿ ಮೃತಪಟ್ಟ ಸಾಂಜೋ ಸುನಿಲ್ ಮೃತದೇಹ ಇಂದು ಹುಟ್ಟೂರಿಗೆ



(ನ್ಯೂಸ್ ಕಡಬ) newskadaba.com ಕಡಬ, ಮಾ.07. ಕಳೆದ ಫೆಬ್ರವರಿ 17 ರಂದು ಐರ್ಲೆಂಡ್ ದೇಶದ ಡಬ್ಲಿನ್ ನಗರದಲ್ಲಿ ನಿಗೂಢವಾಗಿ ಮೃತಪಟ್ಟಿದ್ದ ಕಡಬದ ಯುವಕನ ಮೃತದೇಹವು ಶನಿವಾರದಂದು ಹುಟ್ಟೂರಿಗೆ ಆಗಮಿಸಲಿದೆ.





ಐರ್ಲೆಂಡ್‌ನ ದುಬ್ಲಿನ್ ನಗರದ ಫಿಂಗ್ಲಾಸ್‌ನ ಚಾರ್ಲ್ಸ್‌ಟೌನ್ ಪ್ರದೇಶದ ನಿವಾಸದಲ್ಲಿ ವಾಸವಾಗಿದ್ದ ಕಡಬ ತಾಲೂಕು ಕಡಬ ಕುಟ್ರುಪಾಡಿ ಗ್ರಾಮದ ವಿಮಲಗಿರಿ ನಿವಾಸಿ ಸುನಿಲ್‌ ಎಂಬವರ ಪುತ್ರ ಸಾಂಜೋ ಸುನಿಲ್(31) ನಿಗೂಢವಾಗಿ ಮೃತಪಟ್ಟಿದ್ದರು.






ಸ್ಯಾಂಜೋರವರ ಪತ್ನಿ ಕಳೆದ ಎರಡು ವರ್ಷಗಳಿಂದ ಐರ್ಲೆಂಡ್ ನ ದುಬ್ಲಿನ್ ನಲ್ಲಿ ಶುಶ್ರೂಷಕಿಯಾಗಿ ಕೆಲಸದಲ್ಲಿದ್ದು, ತಿಂಗಳ ಹಿಂದಷ್ಟೇ ಪತಿಯನ್ನು ಫ್ಯಾಮಿಲಿ ವೀಸಾ ಮೂಲಕ ಐರ್ಲೆಂಡ್ ಗೆ ಕರೆಸಿಕೊಂಡಿದ್ದರು. ಫೆಬ್ರವರಿ 17 ರಂದು ಸಾಂಜೋ ಸುನಿಲ್ ತನ್ನ ನಿವಾಸದಲ್ಲಿ ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದರು.

ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಬಗ್ಗೆ ಪರಿಗಣಿಸಿರುವ ಐರ್ಲೆಂಡ್ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸಾಂಜೋರವರ ಮೃತದೇಹವು ಇಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಸಂಜೆ 7 ಗಂಟೆಗೆ ಮೃತರ ಮನೆಯಲ್ಲಿ ಅಂತಿಮ ದರ್ಶನ ನಡೆಯಲಿದೆ. ಮಾರ್ಚ್ 08 ಭಾನುವಾರ ಅಪರಾಹ್ನ 3 ಗಂಟೆಗೆ ವಿಮಲಗಿರಿ ಸೈಂಟ್ ಮೇರೀಸ್ ಚರ್ಚಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ…

error: Content is protected !!
Scroll to Top