(ನ್ಯೂಸ್ ಕಡಬ) newskadaba.com, ಮಾ.04 : ಆರಂಭಿಕ ವಹಿವಾಟಿನಲ್ಲೇ ರೂಪಾಯಿ ಮೌಲ್ಯ ಬುಧವಾರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತಗೊಂಡಿದೆ. ಇರಾನ್ ವಿರುದ್ಧ ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ನಡೆಸುತ್ತಿರುವ ಪರಿಣಾಮ ಈಗ ಜಾಗತಿಕ ಮಾರುಕಟ್ಟೆಯಲ್ಲಿ ಗೋಚರವಾಗತೊಡಗಿದೆ.
ಡಾಲರ್ ಎದುರು ರೂಪಾಯಿ ಮೌಲ್ಯವು ಬುಧವಾರ ಸಾರ್ವಕಾಲಿಕ ಕನಿಷ್ಠ ಮಟ್ಟ 92.17ಕ್ಕೆ ತಲುಪಿದ್ದು, ಆರಂಭಿಕ ವಹಿವಾಟಿನಲ್ಲಿ 68 ಪೈಸೆ ಕುಸಿತಗೊಂಡಿತ್ತು. ಈ ಹಿಂದೆ ಜನವರಿ ಅಂತ್ಯದಲ್ಲಿ ರೂಪಾಯಿ ಮೌಲ್ಯ ಡಾಲರ್ ಎದುರು 91.9875 ಗೆ ಕುಸಿತವಾಗಿತ್ತು. ಇದು ಈ ಹಿಂದಿನ ಕನಿಷ್ಠ ಮಟ್ಟವಾಗಿದೆ….
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಪರಿಣಾಮ ಬುಧವಾರ ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ 68 ಪೈಸೆ ಕುಸಿದು 92.17ಕ್ಕೆ ತಲುಪಿತ್ತು. ಸಂಘರ್ಷದಲ್ಲಿ ಭಾರತ ಭಾಗಿಯಾಗದೇ ಇದ್ದರೂ ಕೂಡ ಮಾರುಕಟ್ಟೆಯ ಮೇಲೆ ಯುದ್ಧ ಬೀರುವ ಪರಿಣಾಮವನ್ನು ಎದುರಿಸಲೇ ಬೇಕಿದೆ. ಇದು ವ್ಯಾಪಾರ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎನ್ನುತ್ತಾರೆ ಆರ್ಥಿಕ ತಜ್ಞರು..






