(ನ್ಯೂಸ್ ಕಡಬ) newskadaba.com, ಮಾ.04 : ಅಮೆರಿಕಾ-ಇರಾನ್ ಸಂಘರ್ಷದ ನಡುವೆ ಬೆಲೆಯಲ್ಲಿ ಭಾರಿ ಏರಿಳಿಕೆ ಆಗುತ್ತಿದೆ. ಮಂಗಳವಾರ ಚಿನ್ನದ ಬೆಲೆ 1.70 ಲಕ್ಷಕ್ಕೆ ತಲುಪಿತ್ತು ಬುಧವಾರ 1.64 ಲಕ್ಷಕ್ಕೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯೂ 2,85,00 ಕ್ಕೆ ಇಳಿದಿದೆ.
ಶುದ್ಧ ಚಿನ್ನದ ಇಂದಿನ ದರ
ಮಾರ್ಚ್ 4, 2026, ಬುಧವಾರದಂದು 24 ಕ್ಯಾರೆಟ್ 10 ಗ್ರಾಂ ನಲ್ಲಿ 3,110 ರೂ ಇಳಿಕೆ ಆಗಿ,1,64,510 ಕ್ಕೆ ಇಳಿಕೆಯಾಗಿದೆ. 1 ಗ್ರಾಂ ಬೆಲೆ ಇಂದು 311 ರೂ ಇಳಿಕೆ ಕಂಡಿದ್ದು, 16,451 ರೂ ದಾಖಲಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ 1 ಗ್ರಾಂ ಬೆಲೆ 285 ರೂ ಇಳಿಕೆ ಆಗಿ 15080 ರೂ ಆಗಿದ್ದು 10 ಗ್ರಾಂ ಬೆಲೆ 1,50,800 ರೂಪಾಯಿಗೆ ತಲುಪಿದೆ.
ಬೆಳ್ಳಿ ಬೆಲೆ ಭಾರಿ ಇಳಿಕೆ
ಬೆಳ್ಳಿ ಬೆಲೆ 10 ಸಾವಿರ ಇಳಿಕೆ ಆಗಿದ್ದು 2,85,000 ರೂ ದಾಖಲಿಸಿದೆ.








