ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿ ಉದ್ವಿಗ್ನತೆ – ಮಿಲಿಟರಿ ದಾಳಿಗಳಲ್ಲಿ 55 ಪಾಕ್ ಸೈನಿಕರ ಹತ್ಯೆ, 23 ಸೆರೆ



(ನ್ಯೂಸ್‌ ಕಡಬ) newskadaba.com,ಫೆ.27 : ಪಾಕಿಸ್ತಾನದ ವಾಯುದಾಳಿಗೆ ಪ್ರತೀಕಾರವಾಗಿ ಅಫ್ಘಾನಿಸ್ತಾನ ನಡೆಸಿದ ಮಿಲಿಟರಿ ದಾಳಿಯಲ್ಲಿ 55 ಪಾಕಿಸ್ತಾನಿ ಸೈನಿಕರು ಹತ್ಯೆಗೀಡಾಗಿದ್ದು, 23 ಮಂದಿ ಜೀವಂತವಾಗಿ ಸೆರೆಹಿಡಿಯಲ್ಪಟ್ಟಿದ್ದಾರೆ. ಈ ದಾಳಿಗೆ ತಕ್ಷಣವೇ ಪಾಕಿಸ್ತಾನವು ಪ್ರತೀಕಾರ ವಾಯುದಾಳಿ ನಡೆಸಿದೆ.





ಶುಕ್ರವಾರ ಬೆಳಗ್ಗೆ ಕಾಬೂಲ್, ಕಂದಹಾರ್ ಮತ್ತು ಪಕ್ತಿಯಾ ಪ್ರಾಂತ್ಯಗಳ ಮೇಲೆ ನಡೆದ ಬಾಂಬ್ ದಾಳಿಗಳಲ್ಲಿ ಸಂಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ. ಡುರಾಂಡ್ ರೇಖೆಯ 2,611 ಕೀಮೀ ಉದ್ದದ ಗಡಿ ಮತ್ತು ಟೋರ್ಖಾಮ್ ಭಾಗದಲ್ಲಿ ಉಭಯ ದೇಶಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಪಾಕಿಸ್ತಾನ ಸೇನೆ ಗಡಿ ಗ್ರಾಮಗಳನ್ನು ಖಾಲಿ ಮಾಡಿರುವುದಾಗಿ ವರದಿಯಾಗಿದೆ.






ಇದಕ್ಕೂ ಮುನ್ನ, ನಂಗರ್‌ಹಾರ್ ಮತ್ತು ಪಕ್ತಿಯಾ ಪ್ರಾಂತ್ಯಗಳಲ್ಲಿ ಪಾಕಿಸ್ತಾನ ನಡೆಸಿದ್ದ ವಾಯುದಾಳಿಗೆ ಪ್ರತಿಯಾಗಿ ಅಫ್ಘಾನ್ ಸೇನೆ ಕಾರ್ಯಾಚರಣೆ ನಡೆಸಿ 55 ಪಾಕ್ ಸೈನಿಕರನ್ನು ಹತ್ಯೆಗೈದು, 23 ಮಂದಿಯನ್ನು ಸೆರೆಹಿಡಿದಿತ್ತು. ಅಫ್ಘಾನ್ ಪಡೆ ಡುರಾಂಡ್ ರೇಖೆ ಉದ್ದಕ್ಕೂ 1 ಪ್ರಧಾನ ಕಚೇರಿ ಮತ್ತು 19 ಔಟ್‌ಪೋಸ್ಟ್‌ಗಳನ್ನು ವಶಪಡಿಸಿಕೊಂಡಿತು ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರವನ್ನು ಪಡೆದಿದೆ.

ಕಳೆದ ಅಕ್ಟೋಬರ್ 19 ರಂದು ಕತಾರ್ ಮಧ್ಯಸ್ಥಿಕೆಯಲ್ಲಿ ಘೋಷಿತ ಕದನ ವಿರಾಮದ ನಂತರ, ಎರಡು ದೇಶಗಳ ನಡುವಿನ ಉದ್ವಿಗ್ನತೆ ಮತ್ತೆ ತೀವ್ರಗೊಂಡಿದೆ.

error: Content is protected !!
Scroll to Top