(ನ್ಯೂಸ್ ಕಡಬ) newskadaba.com ಕಡಬ, ಫೆ. 16. ಕಳೆದ ಐದಾರು ವರ್ಷಗಳಿಂದ ಕಡಬದ ಹೃದಯ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಮಹಿಳೆಯರ, ಪುರುಷರ ಮತ್ತು ಮಕ್ಕಳ ವಸ್ತ್ರಗಳಿಗೆ ಹೆಸರು ವಾಸಿಯಾಗಿರುವ ಪಿಲ್ಯ ಫ್ಯಾಷನ್ ಆಯೋಜಿಸಿದ್ದ ವಿನೂತನ ಮಾದರಿಯ ಮೆಗಾ ಆಫರ್ ನ ಕೊನೆಯ ಡ್ರಾ ಕಾರ್ಯಕ್ರಮದಲ್ಲಿ ಸ್ವಿಫ್ಟ್ ಕಾರೊಂದು ಕಡಬ ತಾಲೂಕಿನ ಕೋಡಿಂಬಾಳದ ಷರೀಫ್ ಮೇಸ್ತ್ರಿ ಎಂಬವರ ಪಾಲಿಗೆ ಒಲಿದು ಬಂದಿದೆ.
ವಿನೂತನ ಮಾದರಿಯ ಪಿಲ್ಯ ಫ್ಯಾಷನ್ ಮೆಗಾ ಆಫರ್, ಐದು ತಿಂಗಳ ಯೋಜನೆಯಾಗಿದ್ದು ಕೊನೆಯ ಡ್ರಾ ಫೆಬ್ರವರಿ ತಿಂಗಳ ಐದರಂದು ನಡೆದಿದ್ದು ಅದರಲ್ಲಿ ಸ್ವಿಫ್ಟ್ ಕಾರು ಆಯೋಜಿಸಲಾಗಿತ್ತು. ಈ ಯೋಜನೆಯಲ್ಲಿ ಕೇವಲ ಒಂದು ಬಾರಿ ಒಂದು ಸಾವಿರ ರೂಪಾಯಿ ಪಾವತಿಸಿ ಅಡ್ವಾನ್ಸ್ ವೋಚರ್ ಪಡೆದರೆ 101 ಬಹುಮಾನಗಳನ್ನು ಪಡೆಯುವ ಅವಕಾಶ ಕಲ್ಪಿಸಲಾಗಿತ್ತು.
ಈ ಯೋಜನೆಯಲ್ಲಿ ಒಟ್ಟು 1 ಸ್ವಿಫ್ಟ್ ಕಾರು ಮತ್ತು 4 ದ್ವಿಚಕ್ರ ವಾಹನ, 50 ಮಂದಿಗೆ ಚಿನ್ನದ ನಾಣ್ಯ, 18 ಸ್ಮಾರ್ಟ್ ಫೋನ್, 18 ಸ್ಮಾರ್ಟ್ ಟಿವಿ ಹಾಗೂ 10 ಮಕ್ಕಳ ಸೈಕಲ್ ಬಹುಮಾನಗಳನ್ನು ಆಯೋಜಿಸಲಾಗಿತ್ತು.
ಇದೀಗ ಈ ಯೋಜನೆಯು ಎರಡನೇ ಹಂತದ ಪಿಲ್ಯ ಮೆಗಾ ಆಫರ್ 101 ದಿನ 101 ಬಹುಮಾನ ನೀಡಿ ಗ್ರಾಹಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯೂ ಬಹುಮಾನ ಸಿಗದ ಎಲ್ಲಾ ಗ್ರಾಹಕರಿಗೆ 1000 ರೂ. ಮೌಲ್ಯದ ವಸ್ತ್ರಗಳನ್ನು ಡಿಸೆಂಬರ್ 31 ರ ತನಕ ಖರೀದಿಸುವ ಅವಕಾಶ ಸಂಸ್ಥೆಯು ನೀಡಿದೆ.








