(ನ್ಯೂಸ್ ಕಡಬ) newskadaba.com, ಫೆ.11: ಚಿನ್ನದ ದರದಲ್ಲಿ ಸತತ ಏರಿಕೆಯ ಬಳಿಕ ಇಂದು ಕೊಂಚ ಇಳಿಕೆ ದಾಖಲಿಸಿದೆ. ಬೆಳ್ಳಿ ಬೆಲೆ ಮಾತ್ರ ತಟಸ್ಥವಾಗಿದೆ. ಮಾರುಕಟ್ಟೆ ಸಕಾರಾತ್ಮಕವಾಗಿದ್ದು ಚಿನ್ನದ ಬೆಲೆ ಮತ್ತೆ ಹೆಚ್ಚಳ ಆಗುವ ಸಾಧ್ಯತೆ ಇದೆ.
ಚಿನ್ನದ ಇಂದಿನ ದರ
ಫೆಬ್ರವರಿ 11 2026, ಬುಧವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. 24 ಕ್ಯಾರೆಟ್ನ 1 ಗ್ರಾಂ ಬೆಲೆ 27 ರೂ ಇಳಿಕೆಯಾಗಿ, 15,851 ರೂ ದಾಖಲಾಗಿದೆ. 10 ಗ್ರಾಂ ಬೆಲೆಯಲ್ಲಿ 270 ರೂ ಇಳಿಕೆ ಆಗಿದ್ದು, 10 ಗ್ರಾಂ ಬೆಲೆ 1,58,510 ರೂಪಾಯಿ ಆಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 25 ರೂ ಕಡಿತವಾಗಿ 14,530 ರೂ ದಾಖಲಾಗಿದೆ. 10 ಗ್ರಾಂನಲ್ಲಿ 250 ರೂ ಇಳಿದಿದ್ದು, 1,45,300 ರೂಪಾಯಿಗೆ ಇಳಿಕೆಯಾಗಿದೆ. ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 15851 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,58,510 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ.








