ಮಂಗಳೂರು : ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ – ಸಹಸವಾರೆ ಸಾವು



(ನ್ಯೂಸ್‌ ಕಡಬ) newskadaba.com,ಫೆ.05 ಮಂಗಳೂರು: ನಗರದ ನಂತೂರು ಪ್ರದೇಶದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನದ ಸಹಸವಾರೆಯೊಬ್ಬರು ಮೃತಪಟ್ಟಿದ್ದಾರೆ. ಬಲ್ಲಾಳ್‌ಬಾಗ್ ನಿವಾಸಿ ದೀಪ್ತಿ (26) ಮೃತ ದುರ್ದೈವಿ. ದ್ವಿಚಕ್ರ ವಾಹನ ಸವಾರ ಕಿಶೋರ್ (32) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.





ದ್ವಿಚಕ್ರ ವಾಹನವು ಬಲ್ಲಾಳ್‌ಬಾಗ್ ಕಡೆಯಿಂದ ವಾಮಂಜೂರು ಕಡೆಗೆ ತೆರಳುತ್ತಿದ್ದ ವೇಳೆ ನಂತೂರು ಬಸ್ ನಿಲ್ದಾಣದ ಸಮೀಪ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸಹಸವಾರೆ ದೀಪ್ತಿ ಬಸ್‌ನ ಮುಂಭಾಗದ ಚಕ್ರಕ್ಕೆ ಸಿಲುಕಿ ಮುಂದೆ ತಳ್ಳಲ್ಪಟ್ಟಿದ್ದು, ಬಸ್‌ನ ಟಯರ್ ಅವರ ಮೇಲೆ ಹರಿದಿದೆ ಎನ್ನಲಾಗಿದೆ. ಕೂಡಲೇ ಎಜೆ ಆಸ್ಪತ್ರೆಗೆ ಒಯ್ದಿದ್ದು ಅಷ್ಟರಲ್ಲಿ ಆಕೆ ಅಸುನೀಗಿದ್ದಾರೆ.






ನಂತೂರು ಬಳಿಯ ಬಸ್ ನಿಲ್ದಾಣ ಎದುರಲ್ಲೇ ಘಟನೆ ನಡೆದಿದ್ದು ಕುಡುಪು ಭಾಗಕ್ಕೆ ತೆರಳುತ್ತಿದ್ದ 22 ನಂಬರಿನ ಖಾಸಗಿ ಬಸ್ ಡಿಕ್ಕಿಯಾಗಿದೆ. ಬಸ್ ವೇಗವಾಗಿತ್ತೇ, ಸ್ಕೂಟರ್ ಬಲ ಭಾಗದಿಂದ ಎದುರಿಗೆ ಬಂದಿತ್ತೇ ಎನ್ನುವುದು ಗೊತ್ತಾಗಿಲ್ಲ ಎಂದು ಕದ್ರಿ ಪೊಲೀಸರು ತಿಳಿಸಿದ್ದಾರೆ. ‌ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌ಯುವತಿ ಮತ್ತು ಯುವಕ ವಾಮಂಜೂರಿನಲ್ಲಿ ಬರ್ತ್ ಡೇ ಪಾರ್ಟಿಗೆಂದು ತೆರಳುತ್ತಿದ್ದರೆಂದು ತಿಳಿದುಬಂದಿದೆ.

error: Content is protected !!
Scroll to Top