ಲಕ್ಕುಂಡಿಯಲ್ಲಿ ಕಳಸದ ಆಕಾರದ ಚಿಕ್ಕ ಪ್ರಾಚ್ಯಾವಶೇಷ ಪತ್ತೆ ಆಧುನಿಕ ಕಾಲದ ಪೈಪ್‌ ಸಹ ಪತ್ತೆ



 

(ನ್ಯೂಸ್ಕಡಬ) newskadaba.com,.28  ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಭಾನುವಾರ ಮತ್ತು ಗಣರಾಜ್ಯೋತ್ಸವ(ಸೋಮವಾರ)ದ ನಿಮಿತ್ತ 2 ದಿನ ಬಿಡುವು ಪಡೆದಿದ್ದ ಉತ್ಖನನ ಕಾರ್ಯ ಮಂಗಳವಾರ ಮತ್ತೆ ಚುರುಕುಗೊಂಡಿದೆ.





ಉತ್ಖನನದ 10ನೇ ದಿನವಾದ ಮಂಗಳವಾರ ಕಳಸದ ಆಕಾರದ ಚಿಕ್ಕ ಪ್ರಾಚ್ಯಾವಶೇಷ , ಅನಾದಿಕಾಲದ ಬುನಾದಿ ಪತ್ತೆಯಾಗಿ ಸಂಶೋಧಕರಲ್ಲಿಹರ್ಷ ಮೂಡಿಸಿದರೆ, ಉತ್ಖನನ ಸ್ಥಳದಲ್ಲಿ ಕಾಣಿಸಿಕೊಂಡ ಬಿರುಕು ಕಾರ್ಮಿಕರಲ್ಲಿಆತಂಕ ಸೃಷ್ಟಿಸಿದೆ.






ಪ್ರಾಚ್ಯಾವಶೇಷ :

ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಇಲಾಖೆ ಸಹಯೋಗದಲ್ಲಿನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ಕಳಸದಾಕಾರದ ಸಣ್ಣ ಶಿಲೆ ಲಭ್ಯವಾಗಿದೆ. ಅಲ್ಲದೆ, ವೀರಭದ್ರೇಶ್ವರ ದೇವಸ್ಥಾನ ಹಾಗೂ ಪುಷ್ಕರಣಿ ನಡುವೆ ಸಂಪರ್ಕ ಕಲ್ಪಿಸುವ ಬುನಾದಿ ಪತ್ತೆಯಾಗಿದೆ. ವಿಶೇಷವೆಂದರೆ, ಭೂಮಿಯ ಆಳದಲ್ಲಿಆಧುನಿಕ ಕಾಲದ ಪೈಪ್‌ಲೈನ್‌ ಕೂಡ ಪತ್ತೆಯಾಗಿದ್ದು, ಈ ಹಿಂದೆ ಇಲ್ಲಿ ಭೂಮಿಯನ್ನು ಅಗೆಯಲಾಗಿದೆಯೇ ಎಂಬ ಸಂಶಯಕ್ಕೆ ಕಾರಣವಾಗಿದೆ.

error: Content is protected !!
Scroll to Top