ನಂದಿನಿ ಹಾಲು ಮತ್ತು ಮೊಸರು ಇದೀಗ ರೂ. 10ಕ್ಕೆ-ಸಣ್ಣ ಪ್ಯಾಕ್



(ನ್ಯೂಸ್‌ ಕಡಬ) newskadaba.com,ಜ.24 ಬೆಂಗಳೂರು: ನಂದಿನಿ ಹಾಲು ಮತ್ತು ಮೊಸರು ಇದೀಗ ರೂ. 10 ದರದಲ್ಲಿ ಸಣ್ಣ ಪ್ಯಾಕ್‌ಗಳಲ್ಲೂ ಲಭ್ಯವಾಗಲಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಗ್ರಾಹಕರ ದೈನಂದಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಪ್ಯಾಕ್‌ಗಳನ್ನು ಪರಿಚಯಿಸಿದೆ…





ಹೊಸ ಬೆಲೆ ನಿಗದಿ ಪ್ರಕಾರ, ನಂದಿನಿ ಹಾಲು 160 ಮಿಲಿಲೀಟರ್ ಪ್ಯಾಕ್‌ನಲ್ಲಿ ರೂ.10ಕ್ಕೆ ಮಾರಾಟವಾಗಲಿದೆ. ಮೊಸರು 140 ಮಿಲಿಲೀಟರ್ ಪ್ಯಾಕ್‌ನಲ್ಲಿ ಇದೇ ದರಕ್ಕೆ ಲಭ್ಯವಾಗುತ್ತದೆ. ಇದುವರೆಗೆ ಹಾಲು ಮತ್ತು ಮೊಸರು 200 ಮಿಲಿಲೀಟರ್ ಪ್ಯಾಕ್‌ಗಳಲ್ಲಿ ಮಾರಾಟವಾಗುತ್ತಿತ್ತು. ಒಬ್ಬರೇ ವಾಸಿಸುವ ಮನೆಗಳಲ್ಲಿ ಅಥವಾ ಕಡಿಮೆ ಬಳಕೆಯ ಕುಟುಂಬಗಳಲ್ಲಿ 200 ಮಿಲಿಲೀಟರ್ ಹಾಲು ಅಥವಾ ಮೊಸರು ಸಂಪೂರ್ಣವಾಗಿ ಬಳಸಲಾಗದೆ ವ್ಯರ್ಥವಾಗುವ ಸಾಧ್ಯತೆ ಹೆಚ್ಚಾಗಿತ್ತು. ಉಳಿದ ಹಾಲು ಅಥವಾ ಮೊಸರನ್ನು ಸಂಗ್ರಹಿಸುವುದು ಗ್ರಾಹಕರಿಗೆ ಕಷ್ಟಕರವಾಗುತ್ತಿತ್ತು.






ಈ ಹಿನ್ನೆಲೆ, ಕಡಿಮೆ ಬೆಲೆಯಲ್ಲಿ ಸಣ್ಣ ಪ್ರಮಾಣದ ಪ್ಯಾಕ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರು ದೈನಂದಿನ ಬಳಕೆಗೆ ತಕ್ಕಷ್ಟು ತಾಜಾ ಹಾಲು ಅಥವಾ ಮೊಸರನ್ನು ಖರೀದಿಸಬಹುದಾಗಿದೆ. ಇದರಿಂದ ವ್ಯರ್ಥ ಕಡಿಮೆಯಾಗುವುದರ ಜೊತೆಗೆ ಗ್ರಾಹಕರಿಗೆ ಹೆಚ್ಚಿನ ಅನುಕೂಲವೂ ದೊರೆಯಲಿದೆ.

error: Content is protected !!
Scroll to Top