ಬಸ್ ಗಳಲ್ಲಿ ಮಹಿಳೆಯರಿಂದ ಅಂತರವಿರಿಸಲು ಪುರುಷರಿಂದ ಹೊಸ ಪ್ಲಾನ್ ಕೇರಳದಲ್ಲಿ ಟ್ರೆಂಡ್ ಆದ ವೈರಲ್ ವಿಡಿಯೋ



(ನ್ಯೂಸ್ ಕಡಬ) newskadaba.com ಜ. 21. ಕೇರಳದಲ್ಲಿ ಇದೀಗ ಪುರುಷರು ಬಸ್ ಗಳಲ್ಲಿ ಮಹಿಳೆಯರಿಂದ ತಪ್ಪಿಸಿಕೊಳ್ಳುವ ಹೊಸ ಐಡಿಯಾ ಒಂದನ್ನು ಕಂಡು ಹಿಡಿದಿದ್ದು, ಈ ಐಡಿಯಾ ಇದೀಗ ಹೊಸ ಟ್ರೆಂಡ್ ಸೃಷ್ಠಿಸಿದ್ದು, ಬಸ್ ನಲ್ಲಿ ಸಂಚರಿಸುವ ಎಲ್ಲಾ ಪುರುಷರು ಇದನ್ನೇ ಬಳಸಿ ಎಂದು ಕರೆ ನೀಡಿದ್ದಾರೆ.





ಇತ್ತೀಚೆಗೆ ಯುವತಿಯೊಬ್ಬಳು ಕೇರಳದ ರಶ್ ಇದ್ದ ಬಸ್ ಒಂದರಲ್ಲಿ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ವಿಡಿಯೋ ಮಾಡಿ ಜಾಲತಾಣದಲ್ಲಿ ವೈರಲ್ ಮಾಡಿದ್ದಳು. ಈ ವಿಡಿಯೋ ವೈರಲ್ ಆದ ಬೆನಲ್ಲೇ ವಿಡಿಯೋದಲ್ಲಿದ್ದ ವ್ಯಕ್ತಿ ದೀಪಕ್ ಎಂಬಾತ ಅವಮಾನ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದರು. ಬಳಿಕ ಕೇರಳದಲ್ಲಿ ಯುವತಿಯ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿ, ಇದೀಗ ಆಕೆಯ ಮೇಲೆ ಎಫ್ ಐಆರ್ ಕೂಡ ದಾಖಲಾಗಿದೆ.






ಇದರ ನಡುವೆ ಘಟನೆಗೆ ಸಂಬಂಧಿಸಿ ಕೇರಳದಲ್ಲಿ ವಿವಿಧ ರೀತಿಯಲ್ಲಿ ಮೀಮ್ಸ್ ಗಳ ವಿಡಿಯೋಗಳು ಟ್ರೆಂಡ್ ಆಗಲು ಪ್ರಾರಂಭಿಸಿದೆ. ಪುರುಷರು ಘಟನೆಯನ್ನು ವಿಭಿನ್ನ ರೀತಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. ಕೇರಳದಲ್ಲಿ ಪುರುಷರಿಗೂ ರಕ್ಷಣೆ ನೀಡಬೇಕೆಂದು ಒತ್ತಾಯಿಸುವ ಧ್ವನಿ ಕೇಳಿಬರುತ್ತಿದೆ. ಈ ಸಂಬಂಧ ಇನ್‌ಸ್ಟಾಗ್ರಾಮ್ ವೀಡಿಯೊಗಳು ವೈರಲ್ ಆಗುತ್ತಿದ್ದು, ಬಸ್ ನಲ್ಲಿ ಸಂಚರಿಸುವ ವೇಳೆ ಮಹಿಳೆಯರು ಹತ್ತಿರ ಬಾರದಂತೆ ಪುರುಷರು ಕಾರ್ಡ್‌ಬೋರ್ಡ್ ಪೆಟ್ಟಿಗೆಗಳನ್ನು ಅಂಟಿಸಿಕೊಂಡು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ.

error: Content is protected !!
Scroll to Top