(ನ್ಯೂಸ್ ಕಡಬ) newskadaba.com,ಜ.20 ಬೆಂಗಳೂರು: ನಾಗಾಲೋಟದಲ್ಲಿ ಏರಿಕೆಯಾಗುತ್ತಿರುವ ಬೆಳ್ಳಿ ಸತತ ಎರಡನೇ ದಿನವಾದ ಇಂದೂ ಕೂಡ ಪ್ರತಿ ಕೆಜಿಗೆ 10 ಸಾವಿರ ರೂ. ಹೆಚ್ಚಳವಾಗಿದೆ. ಚಿನ್ನ ಮತ್ತು ಬೆಳ್ಳಿ ದರಗಳು ದುಬಾರಿಯಾಗಿದ್ದು, ಇದುವರೆಗಿನ ದಾಖಲೆಗಳ್ನು ದಾಟಿ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿವೆ.
ಒಂದು ಕೆಜಿ ಬೆಳ್ಳಿಗೆ 3,15,000 ರೂ. ಮಾರುಕಟ್ಟೆ ದರವಿದೆ. ಅದೇ ರೀತಿ ಹಳದಿ ಲೋಹ ಚಿನ್ನದ ದರವೂ ನಿರಂತರ ಏರಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನ ಇಂದು ಪ್ರತಿ ಗ್ರಾಂಗೆ 104 ರೂ. ಹೆಚ್ಚಳವಾಗಿದೆ.ಒಂದು ಗ್ರಾಂ ಚಿನ್ನದ ದರವು 14,728 ರೂ. ತಲುಪಿದ್ದು, ಇದೇ ರೀತಿ ಮುಂದುವರೆದರೆ 15 ಸಾವಿರ ರೂ.ಗಳ ಗಡಿ ದಾಟಿದರೂ ಆಶ್ಚರ್ಯಪಡಬೇಕಿಲ್ಲ.
ಭಾನುವಾರ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಕೆಯಾಗದೇ ಸ್ಥಿರವಾಗಿತ್ತು. ಆದರೆ ನಿನ್ನೆಯಿಂದ ಏರುಗತಿಯಲ್ಲಿ ಸಾಗುತ್ತಿದ್ದು, ಸದ್ಯಕ್ಕೆ ಇಳಿಕೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂ ಗೆ 95 ರೂ. ಹೆಚ್ಚಳವಾಗಿದ್ದು, ಪ್ರಸ್ತುತ 13,500 ರೂ.ಗೆ ತಲುಪಿದೆ. ಬೆಳ್ಳಿ ಒಂದು ಗ್ರಾಂಗೆ 10 ರೂ. ಹೆಚ್ಚಳವಾಗಿದ್ದು, 315 ರೂ. ತಲುಪಿದೆ. ಚಿನ್ನ ಮತ್ತು ಬೆಳ್ಳಿ ದರಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಗಗನಮುಖಿಯಾಗಿವೆ.








