ಬೆಳ್ತಂಗಡಿ: ಕಣ್ಮರೆಯಾಗಿದ್ದ ಯುವಕನ ಮೃತದೇಹ ಪತ್ತೆ



(ನ್ಯೂಸ್‌ ಕಡಬ) newskadaba.com,ಡಿ.31 ಬೆಳ್ತಂಗಡಿ: ನಾಪತ್ತೆಯಾಗಿದ್ದ ಬೆಳಾಲು ಪುರುಷರಬೆಟ್ಟು ನಿವಾಸಿ ರಾಜೇಶ್ ಪಿ. (30) ರವರ ಮೃತದೇಹ ಬೆಳಾಲು ಗ್ರಾಮದ ಬಲಿಪೆ ನೇತ್ರಾವತಿ ನದಿಯಲ್ಲಿ ಮಂಗಳವಾರ ಪತ್ತೆಯಾಗಿದೆ.





ಡಿ. 27ರಂದು ಬೆಳಿಗ್ಗೆ ಮನೆಯಿಂದ ಹೊರಟ ರಾಜೇಶ್ ಪಿ, ಹಿಂದಿರುಗದೆ ಕಾಣೆಯಾಗಿದ್ದರು. ಅವರಿಗಾಗಿ ಮನೆಯವರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.






ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿ ನಂತರ ತೀವ್ರ ಹುಡುಕಾಟ ನಡೆಸಿದಾಗ ಮಂಗಳವಾರ ಬೆಳಿಗ್ಗೆ ಬಲಿಪೆಯ ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!
Scroll to Top