ಜಮ್ಮು-ಕಾಶ್ಮೀರದಲ್ಲಿ ಗುಂಡಿನ ದಾಳಿ; ಸೇನಾ ಘಟಕದ ಜೆಸಿಒ ಹುತಾತ್ಮ



(ನ್ಯೂಸ್‌ ಕಡಬ)com,ಡಿ.24: ಸೇನಾ ಶಿಬಿರದೊಳಗೆ ನಡೆದ ಗುಂಡಿನ ದಾಳಿಯಲ್ಲಿ ಸೇನೆಯ ಜೂನಿಯರ್ ಕಮಿಷನ್ಡ್ ಆಫೀಸರ್ ಒಬ್ಬರು ಹುತಾತ್ಮರಾಗಿರುವ ಘಟನೆ ಜಮ್ಮು- ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಸಂಭವಿಸಿದೆ.





ಈ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಘಟನೆ ತನಿಖೆ ಹಂತದಲ್ಲಿದೆ. ಗುಂಡಿನ ದಾಳಿಯ ಹಿಂದೆ ಯಾವುದೇ ಭಯೋತ್ಪಾದಕ ಕೃತ್ಯದ ಸಾಧ್ಯತೆ ಇಲ್ಲ ಎಂದು ರಕ್ಷಣಾ ವಕ್ತಾರರು ಬುಧವಾರ ಮಾಹಿತಿ ನೀಡಿದ್ದಾರೆ.






ಸಾಂಬಾದಲ್ಲಿರುವ ಸೇನಾ ಘಟಕದ ಜೆಸಿಒ ಒಬ್ಬರು ಜಮ್ಮುವಿನಲ್ಲಿ ಕರ್ತವ್ಯದಲ್ಲಿದ್ದಾಗ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ. ಈ ಹಂತದಲ್ಲಿ, ಭಯೋತ್ಪಾದಕ ಕೃತ್ಯದ ಶಂಕೆಯನ್ನು ತಳ್ಳಿಹಾಕಿದ್ದೇವೆ ಎಂದು ಅವರು ತಿಳಿಸಿದ್ದಾರೆ.

error: Content is protected !!
Scroll to Top