ಇಂದಿನ ಚಿನ್ನದ ದರ ಎಷ್ಟಿದೆ ಚೆಕ್ ಮಾಡಿ



(ನ್ಯೂಸ್‌ ಕಡಬ) newskadaba.com,ಡಿ.24: ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬಂಗಾರ ಮತ್ತು ಬೆಳ್ಳಿಯ ಬೆಲೆ ಏರಿಕೆಯು ಮುಂದುವರಿದಿದ್ದು, ಮಂಗಳವಾರ ಶೇ.99.9 ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ 1,40,850 ರು.ಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲೂ ಜಿಗಿತವಾಗಿದ್ದು, 1 ಕೆಜಿ ಬೆಳ್ಳಿಯ ಬೆಲೆ 2,17,250 ರು.ಗೆ ಏರಿಕೆಯಾಗಿದೆ.





ಸೋಮವಾರ ಚಿನ್ನದ ಬೆಲೆ 10 ಗ್ರಾಂಗೆ 1,38,200 ರು. ಇತ್ತು. ಒಂದೇ ದಿನ 2,650 ರು. ಜಿಗಿತವಾಗಿದೆ. 2,14,500 ರು. ಇದ್ದ ಬೆಳ್ಳಿ ಬೆಲೆಯಲ್ಲಿ 2,750 ರು. ಏರಿಕೆಯಾಗಿದೆ. 2024ರ ಡಿ.31ರಂದು ಚಿನ್ನದ ದರ 78,950 ರು. ಇತ್ತು.






 

error: Content is protected !!
Scroll to Top