ಮೊಟ್ಟೆಯ ದರ ಏರಿಕೆ; ಮೊದಲ ಬಾರಿಗೆ 7 ರೂ. ದಾಟಿದ ಬೆಲೆ



(ನ್ಯೂಸ್‌ ಕಡಬ) newskadaba.com,ಡಿ.22 : ಫಾರ್ಮ್ ಕೋಳಿ ಮೊಟ್ಟೆ ದರ ಗಗನಕ್ಕೇರಿದೆ. ಕ್ರಿಸ್‌ಮಸ್‌, ಹೊಸ ವರ್ಷಾಚರಣೆಗೆ ಅಧಿಕ ಪ್ರಮಾಣದ ಕೇಕ್‌ಗಳ ತಯಾರಿಕೆಗೆ ಮೊಟ್ಟೆ ಬಳಕೆಯಾಗುತ್ತಿದೆ. ಈ ಮಧ್ಯೆ ವಿದೇಶಗಳಿಗೂ ಭಾರತದಿಂದ ಮೊಟ್ಟೆ ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದರ ದಾಖಲೆ ಮಟ್ಟ ತಲುಪಿದೆ.





ಮಂಡ್ಯ ಜಿಲ್ಲೆಯಲ್ಲಿ ಫಾರ್ಮ್ ಕೋಳಿ ಮೊಟ್ಟೆ ದರ ಒಂದಕ್ಕೆ 7.50 ರೂ. ತಲುಪಿದೆ. ಹೋಲ್‌ಸೇಲ್‌ ದರವೇ 100ಕ್ಕೆ 700 ರೂ. ಆಗಿದೆ. ತಿಂಗಳ ಹಿಂದಷ್ಟೇ 6ರಿಂದ 6.50 ರೂ. ಇದ್ದದ್ದು ಇದೀಗ ದಿಢೀರ್‌ ಏರಿಕೆಯಾಗಿದೆ. ಪ್ರತಿ ವರ್ಷ ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆಯ ದಿನಗಳು ಹತ್ತಿರವಾಗುತ್ತಿದ್ದಂತೆ ಮೊಟ್ಟೆ ದರ ಹೆಚ್ಚಾಗುವುದು ಸಹಜ. ಆದರೆ, ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚಾಗಿದೆ. 2023ರ ಡಿಸೆಂಬರ್‌ನಲ್ಲಿ ಹೋಲ್‌ಸೇಲ್‌ ದರ 6.10 ರೂ., 2024ರ ಡಿಸೆಂಬರ್‌ನಲ್ಲಿ 6.45 ರೂ. ಇತ್ತು. ಆದರೆ, ಈ ಬಾರಿ 7ರೂ. ತಲುಪಿದ್ದು, ರೀಟೇಲ್‌ನಲ್ಲಿ 7.50 ರೂ.ಗೆ ಮಾರಾಟ ಮಾಡಲಾಗುತ್ತಿದೆ.






ಬೇಸಿಗೆ ಕಾಲದಲ್ಲಿ 10ರಿಂದ 15 ದಿನಗಳಷ್ಟೇ ಮೊಟ್ಟೆಗಳು ಬಳಕೆಗೆ ಯೋಗ್ಯವಾಗಿರುತ್ತವೆ. ಆದರೆ, ಚಳಿಗಾಲದಲ್ಲಿಕನಿಷ್ಠವೆಂದರೂ 1 ತಿಂಗಳ ಕಾಲ ಮೊಟ್ಟೆಯನ್ನು ಶೇಖರಿಸಿಟ್ಟು ಬಳಸಬಹುದು. ಹೀಗಾಗಿ ಚಳಿಗಾಲದಲ್ಲೇ ವಿದೇಶಗಳಿಗೆ ಹೆಚ್ಚಿನ ಪ್ರಮಾಣದ ಕೋಳಿಮೊಟ್ಟೆಗಳನ್ನು ರಪ್ತು ಮಾಡಲಾಗುತ್ತದೆ.

error: Content is protected !!
Scroll to Top